Advertisement

ರಷ್ಯಾದಿಂದ ಕಲ್ಲಿದ್ದಲು ಆಮದು ಹೆಚ್ಚಳಕ್ಕೆ ನಿರ್ಧಾರ

01:00 AM Mar 28, 2022 | Team Udayavani |

ಹೊಸದಿಲ್ಲಿ: ಕಬ್ಬಿಣ ಹಾಗೂ ಉಕ್ಕು ತಯಾರಿಕೆಯಲ್ಲಿ ಇಂಧನ ರೂಪವಾಗಿ ಬಳಕೆಯಾಗುವ ಕೋಕಿಂಗ್‌ ಕಲ್ಲಿದ್ದಲನ್ನು ರಷ್ಯಾದಿಂದ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ಉಕ್ಕು ಕೈಗಾರಿಕಾ ಸಚಿವ ರಾಮಚಂದ್ರ ಪ್ರಸಾದ್‌ ಸಿಂಗ್‌ ತಿಳಿಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನ ವೊಂದರಲ್ಲಿ ಮಾತನಾಡಿದ ಅವರು, “ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಕೋಕಿಂಗ್‌ ಕಲ್ಲಿದ್ದಲನ್ನು ಗಣನೀಯ ಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:ಹಿಜಾಬ್‌ಗಾಗಿ ಪರೀಕ್ಷೆ ಬಹಿಷ್ಕರಿಸಿದರೆ ಮತ್ತೆ ಬರೆಯಲು ಅವಕಾಶವಿಲ್ಲ : ಬಿ.ಸಿ.ನಾಗೇಶ್ ಸೂಚನೆ

ಈಗಾಗಲೇ, 4.5 ಮಿಲಿಯನ್‌ ಟನ್‌ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿದೆ. ಉಕ್ರೇನ್‌- ರಷ್ಯಾ ಯುದ್ಧ ನಡೆಯುತ್ತಿರುವುದರಿಂದ ಕಲ್ಲಿದ್ದಲು ಆಮದಿನ ಮೇಲೆ ಕೊಂಚ ಅಡ್ಡಿಯಾಗಿದೆಯಾದರೂ ಮುಂದಿನ ದಿನಗಳಲ್ಲಿ ಈ ಆಮದನ್ನು ಗಣನೀಯವಾಗಿ ಹೆಚ್ಚಿಸಲು ತೀರ್ಮಾನಿಸಲಾಗಿದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next