Advertisement
ಮರ ವಿಜ್ಞಾನ ತಂತ್ರಜ್ಞಾನ ಸಂಸ್ಥೆ ವತಿಯಿಂದ ಸೋಮವಾರ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ 14ನೇ “ರಾಷ್ಟ್ರೀಯ ವೃಕ್ಷ ಬೇಸಾಯ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಜಾಗತಿಕ ತಾಪಮನ ಕಡಿಮೆ ಮಾಡಲು ಪ್ರಪಂಚದ ಎಲ್ಲ ದೇಶಗಳು ಶ್ರಮಿಸುತ್ತಿವೆ. ಆ ನಿಟ್ಟಿನಲ್ಲಿಯೆ ಒಂದಿಷ್ಟು ದೇಶಗಳು ಸೇರಿಕೊಂಡು ಅಮೆರಿಕ ಮುಂದಾಳತ್ವದಲ್ಲಿ ಪ್ಯಾರಿಸ್ ಒಪ್ಪಂದ ಮಾಡಿಕೊಳ್ಳಲಾಗಿತ್ತು.
Related Articles
Advertisement
ರಾಜ್ಯ ಅರಣ್ಯ ಇಲಾಖೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಮಾತನಾಡಿ, ಅರಣ್ಯ ನಾಶ, ಒತ್ತುವರಿಯಿಂದಾಗಿ ಹವಾಮಾನ ವೈಪರಿತ್ಯದಂತಹ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಅರಣ್ಯ ನಾಶವನ್ನು ತಡೆಗಟ್ಟಲು ಸಮಾಜದ ಎಲ್ಲಾ ವ್ಯವಸ್ಥೆಗಳ ಒಗ್ಗಟ್ಟು ಅವಶ್ಯ. ಪ್ರಮುಖವಾಗಿ ರಾಜಕೀಯ ಒತ್ತಡಕ್ಕೆ ಮಣಿದು ಅರಣ್ಯ ನಾಶ ಮಾಡುವುದನ್ನು ಮೊದಲು ತಡೆಗಟ್ಟಬೇಕಿದೆ.
ಇತ್ತೀಚಿಗೆ ಕಾಡು ಪ್ರಾಣಿಗಳು ಅರಣ್ಯ ನಾಶದಿಂದ ಆಹಾರ ನೀರು ಹರಸಿ ನಗರ ಮತ್ತು ಗ್ರಾಮೀಣ ಭಾಗದ ಕಡೆ ಬರುತ್ತಿದ್ದು, ಇದರಿಂದ ಕಾಡುಪ್ರಾಣಿ ಮಾನವ ಸಂಘರ್ಷ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ “ಅರಣ್ಯ ನಾಶದಿಂದ ನಾವು ಎದುರಿಸುತ್ತಿರುವ ಸಮಸ್ಯೆಗಳೇನು” ಎಂಬುದರ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುತ್ತದೆ.
ಜತೆಗೆ ಕಾಡಿನಲ್ಲಿ ನಶಿಸುತ್ತಿರುವ ಮರಗಳಿಗೆ ಪುನರ್ಜನ್ಮ ನೀಡುವ ವೃಕ್ಷಬೇಸಾಯ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಡೆಹ್ರಾಡೂನ್‌ನ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಷನ್‌ನ ಪ್ರಧಾನ ನಿರ್ದೇಶಕ ಡಾ.ಸುರೇಶ್ ಚಂದ್ರ ಗೈರೋಲಾ ಉಪಸ್ಥಿತರಿದ್ದರು.
ಇಂದು ವನ್ಯಜೀವಿ, ಅರಣ್ಯ, ಮರ ವಿಜ್ಞಾನ ಸಂಸ್ಥೆಗಳೆಲ್ಲವೂ ಬೇರೆ ಬೇರೆಯಾಗಿ ಕೆಲಸ ಮಾಡುತ್ತಿವೆ. ಅದರ ಬದಲು ಒಟ್ಟಿಗೆ ಕೆಲಸ ಮಾಡಿದರೆ, ಅರಣ್ಯ ಮತ್ತು ಅದಕ್ಕೆ ಸಂಬಂಧಿಸಿದ ಅಂಶಗಳ ನಾಶ ತಡೆಯಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಚಿಂತನೆ ನಡೆಸಬೇಕಿದೆ.-ಪುನಾಟಿ ಶ್ರೀಧರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ