ಬಾಲ್ಯದಲ್ಲಿ ತಾಯಿಯ ಮರಣ, ಯೌವ್ವನದಲ್ಲಿ ತಂದೆಯ ಸಾವು. ಒಂದೆಡೆ ಅಕ್ಕನ ಮಕ್ಕಳನ್ನು ನೋಡಿಕೊಳ್ಳಬೇಕಾದ ಸ್ಥಿತಿ. ಇನ್ನೊಂದೆಡೆ ಶಿಕ್ಷಣ ಪಡೆಯುವ ಗುರಿ. ಇದರ ಜತೆಗೆ ಕಬಡ್ಡಿ ಅಭ್ಯಾಸಕ್ಕೆ ಹೋಗುತ್ತಿದ್ದಾಗ ಎದುರಾಗುತ್ತಿದ್ದ ಪ್ರಾಣ ಭಯ. ಇವೆಲ್ಲವನ್ನು ಮೆಟ್ಟಿ ನಿಂತ ಹರಿಯಾಣದ ರೋಹ್ಟಕ್ ಜಿಲ್ಲೆಯ ಚಮಾರಿಯಾ ಗ್ರಾಮದ ದೀಪಕ್ ನಿವಾಸ್ ಹೂಡ, ಇಂದು ಭಾರತೀಯ ಕಬಡ್ಡಿ ತಂಡದ ಆಲ್‌ರೌಂಡರ್ ಆಟಗಾರ.
ಗುವಾಹಟಿಯಲ್ಲಿ 2016ರಲ್ಲಿ ನಡೆದ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಮೊದಲ ಬಾರಿ ಪ್ರತಿನಿಧಿಸಿದ್ದ ದೀಪಕ್, ಅದೇ ವರ್ಷ ಅಹಮದಾಬಾದ್‌ನಲ್ಲಿ ನಡೆದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.
ಕಬಡ್ಡಿ ಆಸಕ್ತಿ ಮೂಡಿದ್ದು ಹೇಗೆ?
ಹರಿಯಾಣ ಕಬಡ್ಡಿ ರಾಜ್ಯ. ಇಲ್ಲಿನ ಬಹುತೇಕರು ಕಬಡ್ಡಿ ಬಗ್ಗೆ ಒಲವು ಹೊಂದಿರುತ್ತಾರೆ. ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ, ಇಂಡಿಯನ್ ನೇವಿ ಸೇರಿದಂತೆ ಹಲವು ತಂಡಗಳು ವೃತ್ತಿಪರವಾಗಿ ಕಬಡ್ಡಿ ಆಡುತ್ತಿದ್ದವು. ಇದನ್ನು ನೋಡಿ ನನಗೂ ಆಸಕ್ತಿ ಬೆಳೆಯಿತು. 2009ರಲ್ಲಿ ಪಿಯುಸಿ ಓದುವಾಗ ಕುಟುಂಬದ ಆರ್ಥಿಕ ಸಂಕಷ್ಟಗಳನ್ನು ಬಗೆಹರಿಸಿಕೊಳ್ಳಲು ಕಬಡ್ಡಿಯನ್ನು ವೃತ್ತಿಯಾಗಿ ಸ್ವೀಕರಿಸಿದೆ. ಚಿಕ್ಕಂದಿನಲ್ಲೆ ತಾಯಿಯನ್ನು ಕಳೆದುಕೊಂಡೆ. ಕೆಲ ವರ್ಷಗಳ ಬಳಿಕ ತಂದೆ ಮೃತ ಪಟ್ಟರು ಆರ್ಥಿಕ ಸಂಕಷ್ಟಗಳು ದಿನೇ ದಿನೆ ಹೆಚ್ಚಾಗ ತೊಡಗಿದ್ದರಿಂದ ಕೆಲ ಕಾಲ ಅರೆಕಾಲಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸಿದೆ.
ರಾತ್ರಿ ಹೊತ್ತು ಅಭ್ಯಾಸ ನಡೆಸುತ್ತಿದ್ದೆ. ಕೆಲವೊಮ್ಮೆ ರಾತ್ರಿ ಊಟಕ್ಕೆ ದುಡ್ಡಿಲ್ಲದೆ ಪರದಾಡುತ್ತಿದ್ದೆವು. ಅಭ್ಯಾಸಕ್ಕಾಗಿ ಊರಿನಿಂದ 5 ಕಿ.ಮೀ. ದೂರವಿರುವ ನರ್ವಲ್‌ಗೆ ಹೋಗಿ ಬರುತ್ತಿದ್ದೆ. ಅಭ್ಯಾಸದ ವೇಳೆ ಗಾಯಗೊಂಡಾಗ ಔಷಧ ಹಚ್ಚಲು ಸಹ ನನ್ನಲ್ಲಿ ಹಣ ಇರುತ್ತಿರಲಿಲ್ಲ ಎಂದು ದೀಪಕ್ ನಿವಾಸ್ ಹೂಡ ತಮ್ಮ ಹಳೆಯ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ಬದುಕು ಬದಲಿಸಿದ ಪ್ರೋ ಕಬಡ್ಡಿ
ನಾನು ಕಬಡ್ಡಿಯಲ್ಲಿ ಮಿಂಚಲು ಪ್ರಮುಖ ಕಾರಣ ಪ್ರೊ ಕಬಡ್ಡಿ ಲೀಗ್. ಈ ಲೀಗ್‌ನಲ್ಲಿ ಆಯ್ಕೆಯಾದ ನಂತರ ಇಂಡಿಯನ್ ಏರ್ ಪೋರ್ಸ್‌ನಲ್ಲಿ ಉದ್ಯೋಗವು ಸಿಕ್ಕಿತು. ಮತ್ತು ಭಾರತ ತಂಡದಲ್ಲಿ ಸ್ಥಾನವು ಲಭಿಸಿತು. ಇದೀಗ ನಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಸುಧಾರಿಸಿದೆ ಎನ್ನುತ್ತಾರೆ ದೀಪಕ್.
ಪ್ರೋ ಕಬಡ್ಡಿ ಅನುಭವದ ಸರಮಾಲೆ
ನನ್ನ ಪ್ರಕಾರ ಪ್ರೋ ಕಬ್ಬಡಿ ಎನ್ನುವುದು ಕೇವಲ ಒಂದು ಲೀಗ್ ಅಲ್ಲ ಇಲ್ಲಿ ಕಲಿಕೆಗೆ ಮತ್ತು ಕಬಡ್ಡಿಯಲ್ಲಿರುವ ನಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಇರುವ ಉತ್ತಮ ವೇದಿಕೆಯಾಗಿದೆ. ಅದೆಷ್ಟೋ ಹಳ್ಳಿಯ ಯುವ ಆಟಗಾರರು ಈ ಅವಕಾಶವನ್ನು ಸದುಪಗೋಗಪಡಿಸಿಕೊಂಡು ರಾಷ್ಟ್ರೀಯ ತಂಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಉಳಿದಂತೆ ಅನುಭವಿ ಕೋಚ್, ಆಟಗಾರರಿಂದ ಸಲಹೆಯನ್ನು ಪಡೆಯುವ ಮೂಲಕ ನಮ್ಮಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳಲು ಉತ್ತಮ ಅವಕಾಶವೂ ಇದೆ ಎನ್ನುತ್ತಾರೆ ದೀಪಕ್ ನಿವಾಸ ಹೂಡ.
ಅಭಿ