Advertisement

ವ್ಯವಹಾರ ಶ್ರೇಯಾಂಕ: ಭಾರತಕ್ಕೆ 63ನೇ ಸ್ಥಾನ

09:49 AM Oct 25, 2019 | sudhir |

ನವದೆಹಲಿ: ವಿಶ್ವ ಬ್ಯಾಂಕ್‌ ಬಿಡುಗಡೆ ಮಾಡಿರುವ ವ್ಯವಹಾರ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಕಾರ್ಯಕ್ಷಮತೆ ಸುಧಾರಿಸಿದೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಆರ್ಥಿಕ ಕ್ಷೇತ್ರ ಸುಧಾರಣೆ ಕಾಣುತ್ತಿದ್ದು, ಸರಕಾರ ಕೈಗೊಂಡಿರುವ ಕ್ರಮಗಳ ಫ‌ಲಶ್ರುತಿ ಈ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

Advertisement

14 ಸ್ಥಾನಗಳ ಮುನ್ನಡೆ
ವ್ಯವಹಾರ ಸೂಚ್ಯಂಕದಲ್ಲಿ ಭಾರತಕ್ಕೆ 63ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕಿಂತ 14 ಸ್ಥಾನಗಳ ಮುನ್ನಡೆ ಸಾಧಿಸಿದೆ ಎಂದು ವರದಿಯಲ್ಲಿನ ಮಾಹಿತಿಯನ್ನು ಸಚಿವಾಲಯ ಹಂಚಿಕೊಂಡಿದೆ. ಸರಕಾರದ “ಮೇಕ್‌ ಇನ್‌ ಇಂಡಿಯಾ’ ದಂತಹ ಯೋಜನೆಗಳು ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತಿದ್ದು ಬಂಡವಾಳ ಹೂಡಿಕೆ ಚಟುವಟಿಕೆಗಳ ಮೇಲೆ ಸಕರಾತ್ಮಕ ಪರಿಣಾಮ ಬೀರಿದೆ.

ನಿರಂತರ ಪ್ರಯತ್ನದ ಫ‌ಲಶುೃತಿ
ಸರಕಾರದ ನಿರಂತರ ಪ್ರಯತ್ನಗಳ ಫ‌ಲವಾಗಿ, ಕಳೆದ ಐದು ವರ್ಷಗಳಲ್ಲಿ (2014-19) ಭಾರತದ ಶ್ರೇಯಾಂಕ ಮಟ್ಟ ಸುಧಾರಿಸಿದ್ದು, 190 ದೇಶಗಳ ಪೈಕಿ 79 ಸ್ಥಾನದಲ್ಲಿದ್ದ ಭಾರತ ಪ್ರಸಕ್ತ ಸಾಲಿನಲ್ಲಿ 14 ಸ್ಥಾನಗಳ ಮುನ್ನಡೆ ಸಾಧಿಸಿದೆ.

ಮಾನದಂಡಗಳು
10 ಮಾನದಂಡಗಳ ಪೈಕಿ ಭಾರತ 7 ಸೂಚಕಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿ ಪಾಲ್ಗೊಂಡಿದೆ.

ಈ ಕ್ಷೇತ್ರಗಳಲ್ಲಿ ಮಹತ್ತರ ಸುಧಾರಣೆ
ಆರ್ಥಿಕ ಕ್ಷೇತ್ರದಲ್ಲಿನ ದಿವಾಳಿತನವನ್ನು ನಿವಾರಿಸುವುದು, ನಿರ್ಮಾಣ ಪರವಾನಿಗಿಗಳನ್ನು ನಿಭಾಯಿಸುವುದು, ಆಸ್ತಿ ನೋಂದಾವಣೆ, ಗಡಿಯುದ್ದಕ್ಕೂ ವ್ಯಾಪಾರ ಮಾಡುವುದು ಮತ್ತು ತೆರಿಗೆ ಸೂಚಕಗಳನ್ನು ಪಾವತಿಸುವಲ್ಲಿ ಗಮನಾರ್ಹ ಸುಧಾರಣೆಗಳನ್ನು ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

Advertisement

ಟಾಪ್‌ 10 ಯಾವುದು
ಭಾರತದ ಹೊರತಾಗಿ, ಈ ವರ್ಷದ ‘ಟಾಪ್‌ 10 ಸ್ಥಾನಗಳಲ್ಲಿ ದೇಶಗಳು
– ನ್ಯೂಜಿಲ್ಯಾಂಡ್‌
– ಸಿಂಗಾಪುರ್‌
– ಹಾಂಗ್‌ ಕಾಂಗ್‌ ಸರ್‌ ಚೀನ
– ಡೆನ್‌ಮಾರ್ಕ್‌
– ರಿಪಬ್ಲಿಕ್‌ ಆಫ್ ಕೋರಿಯಾ
– ಅಮೆರಿಕಾ
– ಜಾರ್ಜಿಯಾ
– ಯುನೈಟೆಡ್‌ ಕಿಂಗ್‌ಡಮ್‌
– ನಾರ್ವೆ
– ಸ್ವೀಡನ್‌

Advertisement

Udayavani is now on Telegram. Click here to join our channel and stay updated with the latest news.

Next