Advertisement

ಭಾರತ ವಿಶ್ವದಲ್ಲೇ 2ನೇ ಬೃಹತ್‌ ಮೊಬೈಲ್‌ ಉತ್ಪಾದಕ ದೇಶ!

11:35 AM Jun 02, 2020 | mahesh |

ನವದೆಹಲಿ: ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಮಂತ್ರಿ ರವಿಶಂಕರ್‌ ಪ್ರಸಾದ್‌, ಭಾರತೀಯರಿಗೊಂದು ಸಿಹಿಸುದ್ದಿ ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತ ವಿಶ್ವದಲ್ಲೇ 2ನೇ ಬೃಹತ್‌ ಮೊಬೈಲ್‌ ರಾಷ್ಟ್ರವಾಗಿ ಬೆಳೆದಿದೆ. ಇದಕ್ಕೂ ಮೊದಲು ಗರಿಷ್ಠ ಪ್ರಮಾಣದಲ್ಲಿ ಮೊಬೈಲನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ, ಈಗ ಗರಿಷ್ಠ ಪ್ರಮಾಣದಲ್ಲಿ ರಫ್ತು ಮಾಡುವ ಸ್ಥಿತಿಗೆ ತಲುಪಿದೆ ಎಂದು ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

Advertisement

ವಿದೇಶಿ ಕಂಪನಿಗಳು ಈಗ ಭಾರತದಲ್ಲೇ ಮೊಬೈಲ್‌ಗ‌ಳನ್ನು ಉತ್ಪಾದಿಸುತ್ತಿವೆ. ಮೊಬೈಲ್‌ನ ಬಹುತೇಕ ಭಾಗಗಳು ಇಲ್ಲಿಂದಲೇ ತಯಾರಾಗುತ್ತವೆ. ವಿಶ್ವವಿಖ್ಯಾತ ಕಂಪನಿ ಆ್ಯಪಲ್‌ ಕೂಡ, ಚೀನಾದಿಂದ ಪೂರ್ಣ ಪ್ರಮಾಣದಲ್ಲಿ ಹೊರಬಂದು ಭಾರತದಲ್ಲೇ ಸ್ಥಾಪನೆಯಾಗುವ ಬಗ್ಗೆ ಚಿಂತಿಸುತ್ತಿದೆ ಎನ್ನಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕಳೆದ ಐದು ವರ್ಷದಲ್ಲಿ ಈ ಬದಲಾವಣೆಯಾಗಿದೆ ಎಂದು ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಆಗಿರುವ ಬದಲಾವಣೆಗಳೇನು?
● 2014ಕ್ಕೆ ಹೋಲಿಸಿದರೆ 2019ರ ಹೊತ್ತಿಗೆ ಭಾರತದ ಮೊಬೈಲ್‌ ಉತ್ಪಾದನೆಯಲ್ಲಿ ತೀವ್ರ ಏರಿಕೆಯಾಗಿದೆ.
● 2014ರಲ್ಲಿ ಕೇವಲ 2 ಮೊಬೈಲ್‌ ಉತ್ಪಾದನಾ ಘಟಕಗಳಿದ್ದವು. ಈಗ ಆ ಸಂಖ್ಯೆ 300ಕ್ಕೇರಿದೆ.
● 2014ರವರೆಗೆ ಭಾರತದಲ್ಲೇ ಉತ್ಪಾದನೆಯಾದ ಮೊಬೈಲ್‌ಗ‌ಳ ಸಂಖ್ಯೆ 6 ಕೋಟಿ. 2019ರ ಹೊತ್ತಿಗೆ ಈ ಪ್ರಮಾಣ 33 ಕೋಟಿಗೇರಿಕೆ.
● 2014ರಷ್ಟೊತ್ತಿಗೆ ಉತ್ಪಾದನೆಯಾದ ಮೊಬೈಲ್‌ಗ‌ಳ ಒಟ್ಟು ಮೌಲ್ಯ 22,651 ಕೋಟಿ ರೂ. 2019ರ ಹೊತ್ತಿಗೆ ಆ ಮೌಲ್ಯ 2.26 ಲಕ್ಷ ಕೋಟಿ ರೂ.!

Advertisement

Udayavani is now on Telegram. Click here to join our channel and stay updated with the latest news.

Next