Advertisement

ವಿಶ್ವಕ್ಕೆ ಸಂಸ್ಕಾರ, ಸಂಸ್ಕೃತಿ ಕೊಟ್ಟ ಭಾರತ: ಡಾ|ಪರಮೇಶ್ವರ್‌

01:18 AM Jan 19, 2022 | Team Udayavani |

ಉಡುಪಿ: ವಿಶ್ವಕ್ಕೆ ಸಂಸ್ಕಾರ, ಸಂಸ್ಕೃತಿಯನ್ನು ಹೇಳಿಕೊಟ್ಟ ದೇಶ ಭಾರತ. ಜತೆಗೆ ಎಲ್ಲ ರೀತಿಯ ಜ್ಞಾನ ವನ್ನು ಜಗತ್ತಿಗೆ ನೀಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಹೇಳಿದರು.

Advertisement

ಶ್ರೀಕೃಷ್ಣ ಮಠದ ಪರ್ಯಾಯೋತ್ಸವದ ದರ್ಬಾರ್‌ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಪ್ರಪಂಚಕ್ಕೆ ಧರ್ಮವನ್ನು ನೀಡಿದೆ. ಧರ್ಮ ಎಂದರೆ ರಿಲಿಜಿಯನ್‌ ಅಲ್ಲ. ರೈಟಿಯಸ್‌ನೆಸ್‌ (ಸದಾಚಾರ). ಧರ್ಮ (ಸದಾಚಾರ) ಪಾಲಿಸುವ ಮನಸ್ಸು ಎಲ್ಲರಲ್ಲೂ ಬರಬೇಕು ಎಂದರು.

ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತದತ್ತ ಇಂದು ವಿಶ್ವ ನೋಡುತ್ತಿದೆ. ವಿದೇಶಗಳಿಂದ ವಿದ್ವಾಂಸರು ಇಲ್ಲಿಗೆ ಬರುತ್ತಿದ್ದರು. ನಳಂದ, ತಕ್ಷಶಿಲಾ ಮೊದಲಾದ ಶಿಕ್ಷಣ ಸಂಸ್ಥೆಗಳು ಇಲ್ಲಿದ್ದವು ಮನುಷ್ಯ ಶಾಂತಿಯಿಂದ ಬಾಳಲು ಭಾರತ ನೀಡಿದ ಸಂದೇಶ ಪಾಲನೆ ಮಾಡುವುದು ಆವಶ್ಯಕ ಎಂದು ಹೇಳಿದರು.

ಪಂಚಭೂತಗಳ ಮಧ್ಯದಲ್ಲೇ ಜೀವನ ಮಾಡುವ ನಾವೆಲ್ಲರೂ ಒಂದಾಗಿ ಇರಬೇಕು ಮತ್ತು ಈ ಸಂದೇಶ ವನ್ನು ಜಗತ್ತಿಗೆ ನಾವು ಕಲಿಸ ಬೇಕು. ಭಾರತೀಯ ಸಂಸ್ಕೃತಿ ಬಹಳ ವಿಭಿನ್ನವಾಗಿದೆ. ಈ ಪರಂಪರೆಗೆ ಸಾವಿರಾರು ವರ್ಷಗಳ ಇತಿ ಹಾಸವಿದೆ. ಹೀಗಾಗಿ ಭಾರತ ವಿಶಿಷ್ಟವಾದ ದೇಶ ಎಂದರು.

ನಮ್ಮನ್ನು ಸರಿದಾರಿಗೆ ತರುವ ಎಲ್ಲ ಪ್ರಯತ್ನಗಳು ನಮ್ಮ ಸಂಸ್ಕೃತಿಯಲ್ಲಿ ನಡೆದುಕೊಂಡು ಬಂದಿದೆ. ಶ್ರೀಕೃಷ್ಣ ನೀಡಿದ ಸಂದೇಶ, ನೀತಿ ಪಾಠ, ತಣ್ತೀ, ಆದರ್ಶಗಳು ಸಂಸ್ಕೃತಿಯಲ್ಲಿ ಉಳಿದುಕೊಂಡಿವೆ. ಶ್ರೀಕೃಷ್ಣನು ಹಾಕಿಕೊಟ್ಟ ಹಾದಿಯನ್ನು ನಾವೆಲ್ಲರು ಪಾಲನೆ ಮಾಡಿದರೆ ಸಾಕು ಎಂದು ಹೇಳಿದರು.

Advertisement

ಪರ್ಯಾಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಶಾಸಕ ಕೆ. ರಘುಪತಿ ಭಟ್‌ ಸ್ವಾಗತಿಸಿ ಗೌರವಾಧ್ಯಕ್ಷ ಕೆ. ಸೂರ್ಯನಾರಾಯಣ ಉಪಾ ಧ್ಯಾಯ ಪ್ರಸ್ತಾವನೆಗೈದರು.

ಗಣ್ಯರಾದ ಮಂಜುನಾಥ ಭಂಡಾರಿ, ವಿನಯ ಕುಮಾರ್‌ ಸೊರಕೆ,ಅಭಯಚಂದ್ರ ಜೈನ್‌, ಎಂ.ಎಸ್‌. ಮಹಾಬಲೇಶ್ವರ, ಶ್ಯಾಮಲಾಕುಂದರ್‌, ಸುನೀಲ್‌ ಪರಾಂಜಪೆ, ಬಿಂದು ರಾಬರ್ಟ್‌ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್‌ ಪಾಡಿಗಾರ್‌ ವಂದಿಸಿದರು. ನಿವೃತ್ತ ಪ್ರಾಂಶುಪಾಲ ಪ್ರೊ| ಎಂ.ಎಲ್‌. ಸಾಮಗ, ಜಿ. ವಾಸುದೇವ ಭಟ್‌ ಪೆರಂಪಳ್ಳಿ ನಿರೂಪಿಸಿದರು.

ಮಧ್ವರ ಸಂದೇಶ ವಿಶ್ವವ್ಯಾಪಿ:
ನ್ಯಾ| ದಿನೇಶ್‌ ಕುಮಾರ್‌
ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ| ದಿನೇಶ್‌ ಕುಮಾರ್‌ ಮಾತನಾಡಿ, ಆಚಾರ್ಯ ಮಧ್ವರ ತಣ್ತೀಗಳು ನಮಗಷ್ಟೇ ಸಿಮಿತವಾಗಿಲ್ಲ. ಪ್ರಪಂಚದ ಎಲ್ಲ ಕಡೆ ಹಬ್ಬಿವೆ. ಮಧ್ವರು ಹಾಕಿಕೊಟ್ಟ ಪರಿಪಾಠವನ್ನು ವಿಶ್ವದೆಲ್ಲೆಡೆ ನಾನಾ ಜನರು ಪಾಲಿಸುತ್ತಿದ್ದಾರೆ. ಮಧ್ವರು ಇಸ್ಕಾನ್‌ ಮೂಲಕ ವಿಶೇಷ ರೂಪದಿಂದ ವಿಶ್ವದಾದ್ಯಂತ ಎಲ್ಲರನ್ನು ಆಕರ್ಷಿಸುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next