Advertisement
ಸುನಕ್ ಭಾರತೀಯ ಮೂಲದವರು. ಅವರ ಅಜ್ಜಿ- ಅಜ್ಜಂದಿರು ಪಂಜಾಬ್‌ನಿಂದ ಪೂರ್ವ ಆಫ್ರಿಕಾಕ್ಕೆ ವಲಸೆ ಹೋದರು. ಆಫ್ರಿಕಾದ ಕೀನ್ಯಾದಲ್ಲಿ ಅವರ ತಂದೆ ಯಶ್‌ವೀರ್ ಸುನಕ್ ಜನಿಸಿದರು. 1960ರ ದಶಕದಲ್ಲಿ ಆಫ್ರಿಕಾದಿಂದ ದಕ್ಷಿಣ ಇಂಗ್ಲೆಂಡ್‌ನ ಸೌತಾಂಪ್ಟನ್‌ಗೆ ಯಶ್‌ವೀರ್ ವಲಸೆ ಬಂದಿದ್ದರು. ಅಲ್ಲಿ ಯಶ್‌ವೀರ್ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ವೈದ್ಯರಾಗಿ ವೃತ್ತಿ ಆರಂಭಿಸಿದರು. ಆ ವೇಳೆಗಾಗಲೇ ಸೌತಾಂಪ್ಟನ್‌ಗೆ ಆಗಮಿಸಿದ್ದ ಉಷಾ ಸಣ್ಣ ಔಷಧಾಲಯ ನಡೆಸುತ್ತಿದ್ದರು. ಅಲ್ಲಿ ಅವರ ಪರಿಚಯವಾಗಿ ವಿವಾಹವಾದರು. ಅವರಿಗೆ 1980 ಮೇ 12ರಂದು ಜನಿಸಿದ ಪುತ್ರನೇ ರಿಷಿ ಸುನಕ್.
Related Articles
Advertisement
ಕೊರೊನಾಗೆ ರಿಷಿ ಸುನಕ್ ಸೆಡ್ಡು: ಕೊರೊನಾ ಸಂದರ್ಭದಲ್ಲಿ ಜಾಗತಿಕ ಅನಾರೋಗ್ಯ ಒಂದೆಡೆಯಾದರೆ ಆರ್ಥಿಕವಲಯದಲ್ಲಿ ಆದ ತಲ್ಲಣಗಳು ಬ್ರಿಟನ್ ಸರಕಾರಕ್ಕೆ ಅನೇಕ ಸವಾಲುಗಳನ್ನು ತಂದೊಡ್ಡಿದವು. ಬ್ರಿಟಿಷ್ ಅಧಿಕಾರಿಗಳು, ರಾಜ ಮನೆತನ ಸಿಬಂದಿ ಯನ್ನು ಆವರಿಸಿತು. ಅನೇಕ ಕಷ್ಟ-ನಷ್ಟಗಳು ಎದುರಾದವು.ಈ ವೇಳೆಯಲ್ಲಿ ರಿಷಿ ಸುನಕ್ ದೇಶದ ಆರ್ಥಿಕ ಭದ್ರತೆಗಾಗಿ ಶ್ರಮಿಸಿದರು. ಆರ್ಥಿಕ ನೆರವು ನೀಡಬಲ್ಲ ಕಾರ್ಯಕ್ರಮಗಳನ್ನು ಸೃಜಿಸಿದರು. ತುರ್ತು ನಿಧಿಯಲ್ಲಿ ಕೊರೊನಾ ನಿರ್ವಹಣೆಗೆ 400 ಶತಕೋಟಿ ಡಾಲರ್ ಹಣವನ್ನು ಮೀಸಲಿಟ್ಟರು. ಲಾಕ್‌ಡೌನ್ ಹೊರೆ ತಪ್ಪಿಸಲು ಕಂಪೆನಿಗಳಿಗೆ ಆರ್ಥಿಕ ನೆರವನ್ನು ಘೋಷಿಸಿದರು. ಉದ್ಯೋಗಿಗಳಿಗೆ ಸಂಬಳದ ಸಬ್ಸಿಡಿಗಳ ಭರವಸೆ ನೀಡಿದರು. ಸುನಕ್ ಅವರ ಈಟ್ ಔಟ್‌ಟು ಹೆಲ್ಪ್ ಔಟ್ ಯೋಜನೆ ರೆಸ್ಟೊರೆಂಟ್ ಮತ್ತು ಪಬ್‌ಗಳ ಭದ್ರತೆಗೆ ಕಾರಣವಾಯಿತು. ಈ ಎಲ್ಲ ಕಾರ್ಯಕ್ರಮಗಳು ಬ್ರಿಟನ್‌ನಲ್ಲಿ ಸುನಕ್ ಪ್ರಸಿದ್ಧಿಗೆ ಕಾರಣವಾ ಯಿತು. ಸಾಮಾಜಿಕ ಮಾಧ್ಯಮದಲ್ಲಿ ಡಿಶಿ ರಿಷಿ-2020, ಬ್ರಿಟನ್ ಸೆಕ್ಸಿಯಸ್ಟ್ ಎಂಪಿ ಎಂಬೆಲ್ಲ ಮಾತುಗಳು ಕೇಳಿ ಬಂದವು. ರಾಜಕೀಯ ಜೀವನ
– 2010ರಲ್ಲಿ ಸುನಕ್ ಕನ್ಸರ್ವೇಟಿವ್ ಪಕ್ಷಕ್ಕಾಗಿ ಕಾರ್ಯನಿರ್ವಹಣೆ
– 2014ರಲ್ಲಿ ಕಪ್ಪು ಮತ್ತು ಅಲ್ಪಸಂಖ್ಯಾಕರ ಜನಾಂಗೀಯ(ಬಿಎಂಇ) ಸಂಶೋಧನ ಘಟಕದ ಮುಖ್ಯಸ್ಥರಾದರು.
– 2014-15ರಲ್ಲಿ ಸಾರ್ವತ್ರಿಕ ಚುನಾವಣೆ ಹೌಸ್‌ಆಫ್ ಕಾಮನ್ಸ್‌ನಲ್ಲಿ ನಾರ್ತ್ ಯಾರ್ಕ್‌ಷೈರ್ – ರಿಚ್‌ಮಂಡ್(ಯಾರ್ಕ್ಸ್) ಅನ್ನು ಪ್ರತಿನಿಧಿಸುವ ಹೌಸ್ ಆಫ್ ಕಾಮನ್ಸ್‌ಗೆ ಕನ್ಸರ್ವೇಟಿವ್ ಅಭ್ಯರ್ಥಿಯಾಗಿ ಆಯ್ಕೆ ಮತ್ತು ಕಮಾಂಡಿಂಗ್‌ಗೆ ಬಹುಮತದಿಂದ ಆಯ್ಕೆ
– 2015-17ರವರೆಗೆ ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಆಯ್ಕೆ ಸಮಿತಿ ಸದಸ್ಯರಾಗಿದ್ದರು ಮತ್ತು ವ್ಯಾಪಾರ- ಇಂಧನ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಸಂಸದೀಯ ಖಾಸಗಿ ಕಾರ್ಯದರ್ಶಿಯಾಗಿದ್ದರು.
– 2017-18ರಲ್ಲಿ ಸಂಸತ್ತಿಗೆ ಸುನಕ್ ಮರು ಆಯ್ಕೆ
– 2018ರಲ್ಲಿ ಕ್ಯಾಬಿನೆಟ್ ಶೇಕಾಫ್ನಲ್ಲಿ ಥೆರೆಸಾ ಮೇ ಅವರ 2ನೇ ಆಡಳಿತದಲ್ಲಿ ಸ್ಥಳೀಯ ಸರಕಾರದ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
– 2018ರಲ್ಲಿಯೇ ವಸತಿ, ಸಮುದಾಯ, ಸ್ಥಳೀಯ ಸರಕಾರಗಳ ಸಚಿವಾಲಯದಲ್ಲಿ ರಾಜ್ಯ ಅಧೀನ ಕಾರ್ಯದರ್ಶಿಯಾಗಿ ತಮ್ಮ ಮೊದಲ ಮಂತ್ರಿ ಹುದ್ದೆ ಅಲಂಕರಿಸಿದರು.
– 2018-19 ರಿಷಿ ಅವರು ಥೆರೆಸಾ ಮೇ ಅವರ ಬ್ರೆಕ್ಸಿಟ್ ವಾಪಸಾತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೇ ಪರವಾರಿ ಮೂರು ಮತ ಚಲಾಯಿಸಿದರು.
– 2019ರಲ್ಲಿ ಥೆರೆಸಾ ಮೇ ಅವರ ಬಳಿಕ ಕನ್ಸರ್ವೆಟೀವ್ ಪಕ್ಷದಲ್ಲಿ ಬೋರಿಸ್ ಜಾನ್ಸನ್ ಪ್ರಧಾನಿಯಾದರು. ಈ ಅವಧಿಯಲ್ಲಿ ಸುನಕ್ ಬ್ರಿಟನ್ ವಿತ್ತ ಸಚಿವರಾಗಿ ನೇಮಕಗೊಂಡರು.
-2020ರಲ್ಲಿ ಬ್ರಿಟನ್ ವಿತ್ತ ಸಚಿವರಾಗಿ ನೇಮಕ. (ಆಗ ಅವರಿಗೆ 39 ವರ್ಷಕ್ಕೆ ಚಾನ್ಸಲರ್ ಆದ ನಾಲ್ಕನೇ ವ್ಯಕ್ತಿ ಸುನಕ್) ರಿಷಿ ಸುನಕ್ ಬಯಾಗ್ರಫಿ ಜನನ: ಮೇ. 12. 1980
ವಯಸ್ಸು: 42
ತಂದೆ: ಯಶ್‌ವೀರ್ ಸುನಕ್
ತಾಯಿ: ಉಷಾ ಸುನಕ್
ಪತ್ನಿ: ಅಕ್ಷತಾ ಮೂರ್ತಿ
ಮಕ್ಕಳು: ಅನುಷ್ಕಾ, ಕೃಷ್ಣಾ
ವಿದ್ಯಾಭ್ಯಾಸ: ವಿಂಚೆಸ್ಟರ್ ಕಾಲೇಜಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಸ್ಟಾನ್ ಫೋರ್ಡ್ ವಿವಿಯಲ್ಲಿ ಎಂಬಿಎ ಪದವಿ, ಆಕ್ಸ್ ಫರ್ಡ್ ವಿವಿಯಲ್ಲಿ ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಮತ್ತು ಅರ್ಥಶಾಸ್ತ್ರ ಅಧ್ಯಯನ
ಅನುಭವ: ರಾಜಕಾರಣಿ, ವ್ಯಾಪರಸ್ಥ, ಹೂಡಿಕೆ ತಜ್ಞ