Advertisement

ಸ್ವದೇಶಿ ಉತ್ಪನ್ನದಿಂದ ಭಾರತ ಶಕ್ತಿಶಾಲಿ: ಪೂಂಜ

03:31 PM Feb 10, 2021 | Team Udayavani |

ಬೆಳ್ತಂಗಡಿ: ಪಾರಂಪರಿಕ ಕೃಷಿ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿ ದೇಶೀಯ ಉತ್ಪಾದನೆಗೆ ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡಿದ್ದಾರೆ. ಆ ಮೂಲಕ ಸ್ವದೇಶಿ ಉತ್ಪನ್ನಗಳಿಂದ ಶಕ್ತಿಶಾಲಿ ಭಾರತವನ್ನಾಗಿ ಮಾಡಲು ಹೊರಟ್ಟಿದ್ದಾರೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ದ.ಕ. ಜಿಲ್ಲಾ ಕೃಷಿಕ ಸಮಾಜ, ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಬೆಳ್ತಂಗಡಿ, ಆತ್ಮಯೋಜನೆ ಆಶ್ರಯದಲ್ಲಿ ಕೃಷಿ ಇಲಾಖೆ ವಠಾರದಲ್ಲಿ ನಡೆದ ಕಿಸಾನ್‌ ಗೋಷ್ಠಿ ಹಾಗೂ ರೈತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಕೃಷಿಕರ ಕುರಿತು ಪ್ರಶ್ನಾರ್ಥಕ ಚಿಹ್ನೆಗಳಿದ್ದವು. ಅವರ ಬದುಕಿಗೆ ಪುರಕವಾಗಿ ಇಸ್ರೇಲ್‌ ಕೃಷಿ ಪದ್ಧತಿಯನ್ನು ಬೆರಳು ಮಾಡಿ ತೋರಿಸುವಂತಾಗಿತ್ತು. ಆದರೆ ಇಂದು ದೇಶದ ರೈತರಿಗೆಯಂತ್ರೋಪಕರಣ, ಕೃಷಿಗೆ ಪೂರಕ ಯೋಜನೆಗಳನ್ನು ರೂಪಿಸಿ ರುವುದರಿಂದ ಆತ್ಮಸ್ಥೈರ್ಯ ಹೆಚ್ಚಿದೆ ಮತ್ತು ಆಧುನಿಕ ಕೃಷಿಯೆಡೆಗೆ ಉತ್ಸಾಹ ಮೂಡಿದೆ. ಆದರೂ ಕೆಲವೊಂದು ಪರಿಸ್ಥಿತಿಯಲ್ಲಿ ಕೃಷಿಯಿಂದ ಲಾಭವಿಲ್ಲ ಎಂಬ ಮಾತಿನಿಂದ ಯುವಕರು ವಿಚಲಿತರಾಗುತ್ತಿದ್ದಾರೆ. ಇದರಿಂದ ರೈತರು ಹೊರಬಂದು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಮಿಶ್ರಕೃಷಿ ಪದ್ಧತಿಯನ್ನ ಅನುಸರಿಸಬೇಕು ಎಂದರು.

ಏತ ನೀರಾವರಿಗೆ ಅಗತ್ಯ ಯೋಜನೆ

ದ.ಕ. ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸುವ ಸಲುವಾಗಿ ಕಿಂಡಿಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. 125 ಕೋ. ರೂ. ವೆಚ್ಚದಲ್ಲಿ 27 ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿಕರ ಅಭಿವೃದ್ಧಿಯ ದೃಷ್ಟಿಯಿಂದ ಜಿ.ಪಂ. ವ್ಯಾಪ್ತಿಯಲ್ಲಿ ಏತ ನೀರಾವರಿಗೆ ಅಗತ್ಯ ಯೋಜನೆ ರೂಪಿಸಲಾಗುತ್ತಿದೆ.
-ಹರೀಶ್‌ ಪೂಂಜ, ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next