Advertisement

ಬಂಡವಾಳ ಹೂಡಿಕೆಗೆ ಭಾರತವೇ ಉತ್ತಮ

07:19 AM Nov 15, 2018 | Team Udayavani |

ಸಿಂಗಾಪುರ: ಭಾರತವು ಉತ್ತಮ ಹೂಡಿಕೆ ತಾಣ. ಭಾರತದ 130 ಕೋಟಿ ಜನರನ್ನು ಆರ್ಥಿಕತೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಆಧಾರ್‌ ಮೂಲಕ 120 ಕೋಟಿ ಬಯೋಮೆಟ್ರಿಕ್‌ ಗುರುತು ದಾಖಲೆಯನ್ನು ಕೆಲವೇ ವರ್ಷಗಳಲ್ಲಿ ದಾಖಲಿಸಿದ್ದೇವೆ  ಎಂದು ಪ್ರಧಾನಿ ನರೇಂದ್ರ ಮೋದಿ, ಸಿಂಗಾಪುರದಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಹಣಕಾಸು ತಂತ್ರಜ್ಞಾನ ಸಮ್ಮೇಳನವಾದ ಫಿನ್‌ಟೆಕ್‌ ಫೆಸ್ಟಿವಲ್‌ನಲ್ಲಿ ಹೇಳಿದ್ದಾರೆ.

Advertisement

ಜಾಗತಿಕ ಆರ್ಥಿಕತೆಯ ಸ್ವರೂಪ ಬದಲಾಗುತ್ತಿದೆ. ತಂತ್ರಜ್ಞಾನವು ಸ್ಪರ್ಧಾ ತ್ಮಕತೆ ಯನ್ನು ಹೆಚ್ಚಿಸುತ್ತಿದೆ. ಹೀಗಾಗಿ ಜನರ ಜೀವನ ಮಟ್ಟವನ್ನು ಇದು ಸುಧಾರಿ ಸುತ್ತಿದೆ. ನಮ್ಮ ದೇಶದ ಪಾವತಿ ಸೇವೆಗಳು ಎಲ್ಲರಗೂ ಅನುಕೂಲಕರವಾಗಿರುವುದ ರಿಂದ ನಮ್ಮ ಡಿಜಿಟಲೀಕರಣ ಯಶಸ್ಸು ಕಂಡಿದೆ ಎಂದಿದ್ದಾರೆ. ನಮ್ಮ ಜನಧನ ಯೋಜನೆಯು ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆ ಒದಗಿಸುವ ಗುರಿ ಹೊಂದಿದ್ದು, 33 ಕೋಟಿ ಬ್ಯಾಂಕ್‌ ಖಾತೆ ಗಳನ್ನು ತೆರೆಯಲಾಗಿದೆ ಎಂದಿದ್ದಾರೆ. ಅಲ್ಲದೆ, ಜಾಗತಿಕ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸುವ ಅಪಿಕ್ಸ್‌ ಎಂಬ ಪ್ಲಾಟ್‌ಫಾರಂ ಅನ್ನೂ ಮೋದಿ ಹಾಗೂ ಸಿಂಗಾ ಪುರ ಉಪಪ್ರಧಾನಿ ಟಿ.ಷಣ್ಮುಗರತ್ನಂ ಉದ್ಘಾಟಿಸಿದ್ದಾರೆ.

ಲೀ ಜೊತೆ ಮಾತುಕತೆ: ಸಿಂಗಾಪುರದ ಪ್ರಧಾನಿ ಲೀ ಸೀನ್‌ ಲೂಂಗ್‌ರನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಮಾತು ಕತೆ ನಡೆಸಿದ್ದಾರೆ. ಹಣಕಾಸು ತಂತ್ರಜ್ಞಾನ ಮತ್ತು ಪ್ರಾದೇಶಿಕ ಆರ್ಥಿಕತೆಯಲ್ಲಿ ಸಹಕಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಉಭಯ ಮುಖಂಡರು ಚರ್ಚಿ ಸಿದರು. ಇದೇ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಜೊತೆಗೂ ಮೋದಿ ಮಾತುಕತೆ ನಡೆಸಿದ್ದಾರೆ. 

ಪೆನ್ಸ್‌ ಜೊತೆ ಮೋದಿ: ಅಮೆರಿಕದ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಜೊತೆಗೆ ಸಿಂಗಾ ಪುರದಲ್ಲಿ ಪ್ರಧಾನಿ ಮೋದಿ ಬುಧವಾರ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ಮಧ್ಯೆ ರಕ್ಷಣೆ ಸಹಕಾರ ಮತ್ತು ಇಂಡೋ ಪೆಸಿಫಿಕ್‌ ವಲಯದಲ್ಲಿ ಮುಕ್ತ ವ್ಯಾಪಾರ ವಹಿವಾಟು ಸೇರಿದಂತೆ ಇತರ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next