Advertisement

Stalin; ಭಾರತದ ಜಾತ್ಯತೀತತೆ ಮತ್ತು ಐಕ್ಯತೆ ಅಪಾಯದಲ್ಲಿದೆ: ತಮಿಳುನಾಡು ಸಿಎಂ

08:51 PM Sep 08, 2023 | Team Udayavani |

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶುಕ್ರವಾರ ಆರೋಪಿಸಿದ್ದಾರೆ.

Advertisement

ಕೇರಳ ಮಾಧ್ಯಮ ಅಕಾಡೆಮಿಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ದೇಶದ ಜಾತ್ಯತೀತತೆ ಮತ್ತು ಐಕ್ಯತೆ ಅಪಾಯದಲ್ಲಿದೆ ಮತ್ತು ಸಾಮಾಜಿಕ ನ್ಯಾಯವನ್ನು ನಾಶಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತೀಯ ಸಂವಿಧಾನವೇ ತಮ್ಮ ‘ವೇದ’ ಎಂದು ಹೇಳಿ ಸಂಸತ್ತಿನ ಮುಂದೆ ತಲೆಬಾಗಿದ್ದರು.ಆದರೆ ಈಗ ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ಜನರು ಅರಿತು ವಿರೋಧಿಸಬೇಕು ಎಂದರು.

“ಭಾರತದ ಏಕತೆ ಮತ್ತು ವೈವಿಧ್ಯತೆ ಮತ್ತು ಜಾತ್ಯತೀತತೆಗೆ ಬೆದರಿಕೆ ಇದೆ ಮತ್ತು ಸಾಮಾಜಿಕ ನ್ಯಾಯವನ್ನು ನಾಶಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಬಿಜೆಪಿಯವರು ದೇಶವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಇದನ್ನು ಬಲವಾಗಿ ವಿರೋಧಿಸುತ್ತೇವೆ. ಕೆಲವರಿಗೆ, ‘ದ್ರಾವಿಡಂ’ ಪದದ ಉಲ್ಲೇಖವು “ಸಿಟ್ಟಿಗೆ” ಕಾರಣವಾಗುತ್ತದೆ. ತಮಿಳುನಾಡು ಮತ್ತು ಕೇರಳ ಎರಡೂ ರಾಜ್ಯಗಳ ಜನರು ಒಂದೇ ದ್ರಾವಿಡ ಕುಟುಂಬಕ್ಕೆ ಸೇರಿದವರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next