Advertisement

ವಿಶ್ವದಲ್ಲಿಯೇ ಭಾರತ ಉದ್ಯಮ ಸ್ನೇಹಿ ರಾಷ್ಟ್ರ: ನಿರ್ಮಲಾ ಸೀತಾರಾಮನ್

09:37 AM Oct 06, 2019 | keerthan |

ಹುಬ್ಬಳ್ಳಿ: ಆರ್ಥಿಕ ಶಿಸ್ತು ಹಾಗೂ ತೆರಿಗೆ ವ್ಯವಸ್ಥೆ ಸುಧಾರಣೆ, ಸರಳೀಕರಣಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಭಾರತ ವಿಶ್ವದಲ್ಲೇ ಕಡಿಮೆ ತೆರಿಗೆ ಮತ್ತು ಉದ್ಯಮ ಸ್ನೇಹಿ ದೇಶವಾಗಿ ಕಂಗೊಳಿಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

Advertisement

ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಕೆಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಅನೇಕ ಬದಲಾವಣೆ, ಸುಧಾರಣೆ ತರಲಾಗಿದೆ. ವಿಶ್ವವೇ ಬದಲಾವಣೆಗೆ ಮುಂದಾಗಿದೆ. ಹಲವು ಸಮಸ್ಯೆ, ವಿಚಾರಗಳಿಗೆ ಪರಿಹಾರ ನೀಡಿಕೆ ನಿಟ್ಟಿನಲ್ಲಿ ಭಾರತ ನಾಯಕನ ಸ್ಥಾನದಲ್ಲಿದೆ ಎಂದರು.

ಹಲವು ವರ್ಷಗಳಿಂದ ಸಂಕೀರ್ಣ ಸ್ಥಿತಿಯಲ್ಲಿದ್ದ ತೆರಿಗೆ ವ್ಯವಸ್ಥೆ ಸರಳೀಕರಣ ಮಾಡಲಾಗಿದೆ. ಕಾರ್ಪೋರೇಟ್ ವಲಯದ ತೆರಿಗೆ ಇಳಿಸಲಾಗಿದೆ. ಹೂಡಿಕೆದಾರರಿಗೆ ವಿಶ್ವದಲ್ಲೇ ಕಡಿಮೆ ತೆರಿಗೆ ದೇಶ ನಮ್ಮದಾಗಿದೆ. ಕೇಂದ್ರ ಸರಕಾರ ಕೈಗೊಂಡ ಕ್ರಾಂತಿಕಾರಕ ಸುಧಾರಣೆ, ಬದಲಾವಣೆ ಆರ್ಥಿಕ-ತೆರಿಗೆ ಕ್ರಮಗಳ ಬಗ್ಗೆ ನಿಮ್ಮ ಗ್ರಾಹಕರಿಗೆ ತಿಳಿವಳಿಕೆಗೆ ಮುಂದಾಗುವಂತೆ ಲೆಕ್ಕಪರಿಶೋಧಕರಿಗೆ ಕರೆ ನೀಡಿದರು.

ವಾಣಿಜ್ಯೋದ್ಯಮಿಗಳು, ಲೆಕ್ಕಪರಿಶೋಧಕರು ಒಗ್ಗೂಡಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ದೇಶಕ್ಕೆ ಉತ್ತಮ ಕೊಡುಗೆ ಆಗಬಲ್ಲದು ಎಂದು ಕೇಂದ್ರ ಸಚಿವೆ ಅಭಿಪ್ರಾಯಪಟ್ಟರು.

Advertisement

ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳಲು ಕೇಂದ್ರ ಅನೇಕ ಶಿಸ್ತು, ಬದ್ದತೆ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next