Advertisement

ವಿಶ್ವಕ್ಕೆ ಗುರುವಾಗುತ್ತಿದೆ ಭಾರತ: ಸೂಲಿಬೆಲೆ

10:00 AM Jul 08, 2019 | Team Udayavani |

ಬನಹಟ್ಟಿ: ಭಾರತ ವಿಶ್ವ ಗುರುವಾಗುತ್ತಿದೆ. ಇದಕ್ಕೆ ದೇಶದ ಮಣ್ಣಿನ ಗುಣವೇ ಕಾರಣ ಎಂದು ಯುವ ಬ್ರಿಗೇಡ್‌ ನೇತಾರ ಸೂಲಿಬೆಲೆ ಚಕ್ರವರ್ತಿ ಹೇಳಿದರು.

Advertisement

ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಕುಲರತ್ನಭೂಷಣ ಮಹಾರಾಜ ನೇತೃತ್ವದಲ್ಲಿ 10 ಸಾವಿರಕ್ಕೂ ಅಧಿಕ ಸಸಿ ನೆಟ್ಟು ಉಸಿರು ಹಂಚೋಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರ ಉಳಿಸಲು ಗಿಡಮರಗಳನ್ನು ಬೆಳೆಸಬೇಕು. ಅದನ್ನು ಕಡಿದು ಹಾಳು ಮಾಡಿದರೆ ಮುಂದಿನ ಪೀಳಿಗೆ ಬದುಕುವುದು ಕಷ್ಟವಾಗುತ್ತದೆ. ಗಿಡಮರ ಹಚ್ಚಿ ಪರಿಸರ ಬೆಳೆಸಲಾಗದಿದ್ದರೆ ಸುಮ್ಮನಿದ್ದು ಬಿಡಿ, ಅದನ್ನು ಕಡಿಯಬೇಡಿ. ರಾಜ್ಯದಲ್ಲಿ ಹಲವು ವರ್ಷಗಳಿಂದ ಲಕ್ಷಾಂತರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 2015ರಲ್ಲಿ ಭದ್ರಗಿರಿ ಬೆಟ್ಟದಲ್ಲಿ ನೆಟ್ಟ ಗಿಡಗಳು ಬೃಹತ್ತಾಗಿ ಬೆಳೆದಿದ್ದು ಖುಷಿ ನೀಡಿದೆ ಎಂದರು.

ಹಳಿಂಗಳಿ ಭದ್ರಗಿರಿ ಬೆಟ್ಟ ಇತಿಹಾಸ ಪ್ರಸಿದ್ದವಾಗಿದ್ದು, ಜೈನ್‌ ಮುನಿಗಳಾದ ಕುಲರತ್ನಭೂಷಣ ಮಹಾರಾಜರು ಲಕ್ಷಾಂತರ ಗಿಡ ನೆಟ್ಟು ಇಲ್ಲಿ ಕದಂಭವನ, ಇನ್ನೊಂದು ಅಶೋಕವನ ಎಂದು ಎರಡು ವನಗಳ ನಿರ್ಮಾಣದ ಮಾಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕಿನ ಅನೇಕ ಶಾಲೆ ಕಾಲೇಜಿನ ಅನೇಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಯುವಕರು, ಸಂಘ ಸಂಸ್ಥೆಗಳ ಕಾರ್ಯಕರ್ತರು, ಮಹಿಳಾ ಸಂಘದ ಸದಸ್ಯರು, ಜೈನ್‌ಸಮಾಜದ ಯುವಕರು, ಜೈನೇತರ ಯುವಕರು ಗಿಡ ನೆಡುವ ಕಾರ್ಯಕರ್ಮದಲ್ಲಿ ಭಾಗಿಯಾಗಿದ್ದರು.

Advertisement

‘ಉಸಿರು ಹಂಚೋಣ’ ಕಾರ್ಯಕ್ರಮದಲ್ಲಿ ಭಾರತೀಯ ಥ್ರೋಬಾಲ್ ತಂಡದ ನಾಯಕಿ ಕೃಪಾ ಜಿ.ಪಿ., ಯುವ ಬ್ರಿಗೇಡ್‌ನ‌ ರಾಜ್ಯ ಸಂಚಾಲಕ ಕಿರಣ ರಾಮ್‌, ಚಂದ್ರಶೇಖರ, ವರ್ಧಮಾನ, ವಿಭಾಗ ಸಂಚಾಲಕ ಸಿದ್ದು ಉಳ್ಳಾಗಡ್ಡಿ, ರಾಹುಲ್ ಉಪಾಧ್ಯೆ, ಶಾಸಕರಾದ ಆನಂದ ನ್ಯಾಮಗೌಡ ಹಾಗೂ ಸಿದ್ದು ಸವದಿ, ಸಂಜಯ ಪಾಟೀಲ, ಶಶಿಕಾಂತ ನಾಯಕ, ಲಕ್ಷ್ಮಣ ಸವದಿ, ಹಿಂದುಪರ ಸಂಘಟನೆಗಳ ಮುಖಂಡ ನಂದಕುಮಾರ ಗಾಯಕವಾಡ, ಸಿಎಂ ಆಪ್ತ ಕಾರ್ಯದರ್ಶಿ ಡಾ| ವೆಂಕಟಾಚಲ, ದೇವಲ ದೇಸಾಯಿ, ನೇಕಾರ ಮುಖಂಡರಾದ ಸುರೇಶ ಚಿಂಡಕ, ಧರೆಪ್ಪ ಉಳ್ಳಾಗಡ್ಡಿ, ಕಲ್ಲಪ ಹಿಪ್ಪರಗಿ, ಈರಪ್ಪ ಹಿಪ್ಪರಗಿ, ಭುಜಬಲಿ ವೆಂಕಟಾಪುರ, ದಾನಿಗೊಂಡ ಶಿಕ್ಷಣ ಸಂಸ್ಥೆಗಳ ಚೇರಮನ್‌ ಎಂ. ಎಸ್‌. ದಾನಿಗೊಂಡ, ಸಿಪಿಐ ಅಶೋಕ ಸದಲಗಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next