Advertisement

ಭಾರತ ಅದ್ಭುತ ದೇಶ, ಮೋದಿ ಜಂಟಲ್‌ಮ್ಯಾನ್

09:24 AM Feb 28, 2020 | Sriram |

ವಾಷಿಂಗ್ಟನ್‌: ಭಾರತ ಅದ್ಭುತ ರಾಷ್ಟ್ರ, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದದಲ್ಲಿ ಸಾಕಷ್ಟು ಪ್ರಕ್ರಿಯೆಗಳು ನಡೆದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಎರಡು ದಿನ ಭಾರತ ಪ್ರವಾಸ ಕೈಗೊಂಡು ಸ್ವದೇಶಕ್ಕೆ ಮರಳಿದ ಬಳಿಕ ಪ್ರತಿಕ್ರಿಯಿಸಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ದ ಗ್ರೇಟ್‌ ಜಂಟಲ್‌ಮ್ಯಾನ್, ಗ್ರೇಟ್‌ ಲೀಡರ್‌, ಭಾರತ ಅಭೂತಪೂರ್ವ ರಾಷ್ಟ್ರವಾಗಿದೆ. ಅಲ್ಲಿ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲಾಯಿತು. ನಿಜಕ್ಕೂ ಸಾಕಷ್ಟು ಆನಂದ ಅನುಭವಿಸಿದೆವು. ಎರಡು ದೇಶಗಳು ನಡುವೆ ವ್ಯಾಪಾರ, ವಹಿವಾಟಿನಲ್ಲಿ ಗಣನೀಯ ಪ್ರಕ್ರಿಯೆಗಳು ಜರುಗಿದವು. ಶತಕೋಟಿ ಹಾಗೂ ಶತಕೋಟಿ ಡಾಲರ್‌ ನಮ್ಮ ದೇಶಕ್ಕೆ ಹರಿದು ಬರಲಿದೆ’ ಎಂದು ತಿಳಿಸಿದ್ದಾರೆ.

ಟ್ರಂಪ್‌ ಭಾರತ ಪ್ರವಾಸ ಸಂದರ್ಭದಲ್ಲಿ ದೆಹಲಿಯಲ್ಲಿ ಕೋಮುಗಲಭೆ ಸಂಭವಿಸಿ, 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ನೂರಾರು ಜನ ಗಾಯಗೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಡೊನಾಲ್ಡ್‌ ಟ್ರಂಪ್‌, ಇದರ ಬಗ್ಗೆ ಕೇಳಿದ್ದೇನೆ. ಆದರೆ, ಈ ಕುರಿತು ಮೋದಿ ಜತೆ ಚರ್ಚಿಸಿಲ್ಲ. ಅದು ಅಲ್ಲಿನ ವಿಷಯವಾಗಿದೆ ಎಂದಿದ್ದಾರೆ.

ನಾಯಕತ್ವದ ವೈಫ‌ಲ್ಯ:
ಟ್ರಂಪ್‌ ಭೇಟಿ ವೇಳೆ ದೆಹಲಿಯಲ್ಲಿ ಸಂಭವಿಸಿರುವ ಗಲಭೆಯು ಮಾನವ ಹಕ್ಕುಗಳ ಉಲ್ಲಂಘಟನೆಯಾಗಿದೆ. ಇದು ನಾಯಕತ್ವದ ವೈಫ‌ಲ್ಯ ಎಂದು ವಿರೋಧ ಪಕ್ಷವಾಗಿರುವ ಡೆಮಾಕ್ರಾಟ್‌ ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಬರ್ನಿ ಸ್ಯಾಂಡರ್ಸ್‌ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next