Advertisement

ಜಾಗತಿಕ ಮಟ್ಟದಲ್ಲಿ ಭಾರತ ಬೆಳೆಯುತ್ತಿರುವ ಮಾರುಕಟ್ಟೆ

09:43 PM Jul 16, 2023 | Team Udayavani |

ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ದೇಶವು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯುವ ಬಲವಾದ ಹಂಬಲ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಇತ್ತೀಚೆಗೆ ಬಿಡುಗಡೆಯಾದ ಕ್ಯಾಪಿಟಲ್‌ ಗ್ರೂಪ್‌ ವರದಿಯನ್ನು ಉಲ್ಲೇಖಿಸಿ ಭಾನುವಾರ ಟ್ವೀಟ್‌ ಮಾಡಿದ ಅವರು, “ಯುವಕರು ಮತ್ತು ಉದ್ಯಮದಾರರಿಗೆ ಈ ವರದಿಯು ಮತ್ತಷ್ಟು ಆಶಾಭಾವನೆಯನ್ನು ಉಂಟು ಮಾಡಲಿದೆ,’ ಎಂದರು.

ಕಳೆದ ಒಂದು ದಶಕದಲ್ಲಿ ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ಭಾರತ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ದೇಶದಲ್ಲಿ ಕಳೆದ 10 ವರ್ಷಗಳ ರಾಜಕೀಯ ಸ್ಥಿರತೆಯು, ಆರ್ಥಿಕ ಅಭಿವೃದ್ಧಿಗೆ ಪ್ರಾಧಾನ್ಯತೆ ಕಲ್ಪಿಸಿದೆ.ನೇರ ಮತ್ತು ಸ್ಥಿರ ಆಸ್ತಿ ಹೂಡಿಕೆ ವಿಸ್ತರಣೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಿದೆ ಎಂದು ವರದಿ ಹೇಳಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next