Advertisement

ಲಂಕಾ ತಂಡಕ್ಕೆ ಬಿಸಿಸಿಐ ಆಹ್ವಾನ

08:00 AM Nov 16, 2017 | Team Udayavani |

ನವದೆಹಲಿ: ಪ್ರಸಕ್ತ ವರ್ಷದ 19 ವರ್ಷದೊಳಗಿನ ಚಾಲೆಂಜರ್ ಟ್ರೋಫಿ ಕ್ರಿಕೆಟ್‌ ಕೂಟಕ್ಕೆ ಬಿಸಿಸಿಐ ಶ್ರೀಲಂಕಾ ತಂಡವನ್ನು ಆಹ್ವಾನಿಸಿದೆ. ಇದಕ್ಕೆ ಲಂಕಾ ಕ್ರಿಕೆಟ್‌ ಮಂಡಳಿ ಒಪ್ಪಿಗೆ ಸೂಚಿಸಿದೆ. ಚಾಲೆಂಜರ್ ಟ್ರೋಫಿಯಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ತಂಡವನ್ನು ಆಹ್ವಾನಿಸಲಾಗಿದೆ.

Advertisement

2018ರಲ್ಲಿ ಅ-19 ವಿಶ್ವಕಪ್‌ ನ್ಯೂಜಿಲೆಂಡ್‌ನ‌ಲ್ಲಿ ನಡೆಯಲಿದೆ. ಹೀಗಾಗಿ ಲಂಕಾ ತಂಡವನ್ನು ಆಹ್ವಾನಿಸುತ್ತಿರುವುದಾಗಿ ಬಿಸಿಸಿಐ ತಿಳಿಸಿದೆ. ಕೂಟದಲ್ಲಿ ಒಟ್ಟು ನಾಲ್ಕು ತಂಡಗಳು ಪಾಲ್ಗೊಳ್ಳಲಿದ್ದು, ಪ್ರತಿ ತಂಡ ಲೀಗ್‌ನಲ್ಲಿ 3 ಪಂದ್ಯ ಆಡಲಿದೆ. ಅಗ್ರ ಸ್ಥಾನ ಪಡೆದ 2 ತಂಡ ಫೈನಲ್‌ ಪ್ರವೇಶಿಸಲಿವೆ. “ಎ’ ತಂಡವನ್ನು ಪೃಥ್ವಿ ಶಾ, “ಬಿ’ ತಂಡವನ್ನು ಹಿಮಾಂಶು ರಾಣಾ, “ಸಿ’ ತಂಡವನ್ನು ಅಭಿಷೇಕ್‌ ಶರ್ಮ ಮುನ್ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next