ನವದೆಹಲಿ: ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಇದೇ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿ ಮಾತನಾಡಿದ್ದು, ಕೋವಿಡ್ ಸಂದರ್ಭದಲ್ಲಿ ದೇಶಕ್ಕಾಗಿ ಮತ್ತು ಜನರಿಗಾಗಿ ಹೋರಾಡಿದ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ದೊಡ್ಡ ಲಸಿಕಾ ಅಭಿಯಾನ ಹಾಗೂ ಒಲಂಪಿಕ್ಸ್ ನಲ್ಲಿ ಯುವ ಕ್ರೀಡಾಪಟುಗಳು ಮಾಡಿದ ಸಾಧನೆಯ ಕುರಿತು ಪ್ರಸ್ತಾಪ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
25 ವರ್ಷದಲ್ಲಿ ಹೊಸ ಭಾರತವನ್ನು ಕಟ್ಟಲು ಪಣ ತೊಡೋಣ. ದೇಶದ 54 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದು ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನವಾಗಿದೆ. ಮೊದಲಿಗಿಂತ ಈಗ ಸರ್ಕಾರ ಯೋಜನೆಗಳ ವೇಗ ಹೆಚ್ಚಿದೆ. ಪಿಂಚಣಿ ಯೋಜನೆ, ವಸತಿ ಯೋಜನೆಯ ಜನರಿಗೆ ತಲುಪಿದೆ.
ಆಯುಷ್ಮಾನ್ ಕಾರ್ಡ್, ಉಜ್ವಲ, ವಿಮಾ ಯೋಜನೆ ದೇಶದ ಜನತೆಗೆ ತಲುಪಿದೆ. ಶೇ.100 ಮನೆಗಳಿಗೆ ವಿದ್ಯುತ್ ತಲುಪಿದೆ. 2 ವರ್ಷದಲ್ಲಿ 4.5 ಕೋಟಿ ಮನೆಗಳಿಗೆ ಕುಡಿಯುವ ನೀರು ತಲುಪಿದೆ. ನಾಗರಿಕರಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬೇಕಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕಡಿಮೆಯಾಗದಂತ ನೋಡಿಕೊಳ್ಳಬೇಕಿದೆ.
ಸರ್ಕಾರ ಬೇರೆ ಬೇರೆ ಯೋಜನೆಗಳ ಮೂಲಕ ಜನರಿಗೆ ಅಕ್ಕಿ ನೀಡಲಾಗುತ್ತಿದೆ. ವೈದ್ಯಕೀಯ ಶಿಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ.. ಮೆಡಿಕಲ್ ಸೀಟ್ಗಳನ್ನು ಹೆಚ್ಚಳ ಮಾಡಲಾಗಿದೆ. 75 ವೆಲ್ ನೆಸ್ ಸೆಂಟರ್ಗಳನ್ನು ದೇಶದಲ್ಲಿ ತೆರೆಯಲಾಗಿದೆ. ಬಡವರು, ದಲಿತರು, ಒಬಿಸಿಗಳಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ. ಒಬಿಸಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೆ ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.
Related Articles
ಜಮ್ಮು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೂ ಸಿದ್ಧತೆ ನಡೆಸಲಾಗಿದೆ.. ಲಡಾಖ್ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ವೇಗವಾಗಿ ನಡೆಯುತ್ತಿದೆ. ಶ್ರೇಷ್ಠ ಭಾರತ ನಿರ್ಮಾಣದ ಉತ್ಸಾಹ ಹೆಚ್ಚಳವಾಗಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದ್ದು.. ಹೃದಯ ಮೂಲಕವೂ ಈಶಾನ್ಯ ರಾಜ್ಯಗಳೊಂದಿಗೆ ಸಂಬಂಧ ಬೆಸೆಯಲಾಗುತ್ತಿದೆ.
ದೇಶದಲ್ಲಿ ಸಹಕಾರವಾದದ ಮೂಲಕ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ದೇಶದಲ್ಲಿ 110 ಆಕಾಂಕ್ಷಿ ಜಿಲ್ಲೆಗಳಿದ್ದು, ಎಲ್ಲಾ ಜಿಲ್ಲೆಗಳಿಗೂ ಒತ್ತು ನೀಡಲಾಗುತ್ತಿದೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ಮಾಡಿದ್ದೇವೆ. ಮಹಿಳಾ ಉದ್ಯಮಿಗಳ ಉತ್ಪನ್ನಗಳು ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತಿದೆ. ಗ್ರಾಮಗಳಲ್ಲಿ ಡಿಜಿಟಲ್ ಕ್ರಾಂತ್ರಿಯಾಗುತ್ತಿದೆ. ಕೃಷಿ ಕ್ಷೇತ್ರದಲ್ಲೂ ವೈಜ್ಞಾನಿಕ ತಂತ್ರಜ್ಞಾನ ಅವಳಡಿಸಿಕೊಳ್ಳಬೇಕಿದೆ.
ದೇಶ ಶೇ.80 ರೈತರ ಬಳಿಕ 2 ಎಕರೆ ಗಿಂತ ಕಡಿಮೆ ಭೂಮಿ ಇದ್ದು. ಕೃಷಿ ಕ್ಷೇತ್ರದ ಎದುರು ದೊಡ್ಡ ಸವಾಲು ಇದೆ. ಆಜಾದಿ ಕ ಅಮೃತ್ ಮಹೋತ್ಸವ್ 2023ರವರೆಗ ಮುಂದುವರೆಯಲಿದೆ. ಈ ನಿಟ್ಟಿನಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಿದೆ. 75 ವಂದೇ ಭಾರತ್ ಟ್ರೇನ್ ಗಳು ದೇಶದಲ್ಲಿ ಸಂಚರಿಸಬೇಕು. ಭಾರತೀಯ ರೈಲ್ವೆ ಆಧುನೀಕರಣದಿಂದ ಮುನ್ನುಗ್ಗುತ್ತಿದೆ. ಎಂದು ಧ್ವಜಾರೋಹಣ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು.
100 ಲಕ್ಷ ಕೋಟಿ ಯೋಜನೆ ಮೂಲಕ ಉದ್ಯೋಗ ಸೃಷ್ಟಿ ಮಾಡಲಿದ್ದೇವೆ. ಪ್ರಧಾನ ಮಂತ್ರಿ ಗತಿ ಮಿಷನ್ ಯೋಜನೆಯ ಮೂಲಕ ಮಾಸ್ಟರ್ ಪ್ಲ್ಯಾನ್ ಮಾಡಲಾಗುತ್ತಿದೆ. ಯೋಜನೆಯನ್ನು ಶೀಘ್ರವೇ ಜಾರಿ ಮಾಡಲಾಗುತ್ತದೆ.
ಭಾರತದ ಸ್ವಯಂ ಜಲಂತರ್ಗಾಮಿ, ಫೈಟರ್ ಜೆಟ್ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಅಂತರಿಕ್ಷದಲ್ಲಿ ಭಾರತದ ಧ್ವಜ ಹರಿಸಲು ಸಿದ್ಧರಾಗಿದ್ದೇವೆ. ಉತ್ತಮ ಉತ್ಪನ್ನಗಳ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ದೃಢವಾಗಿ ನಿಲ್ಲಬೇಕು. ಸ್ಪರ್ಧೆ ಮಾಡಬೇಕು. ಭಾರತ 3 ಬಿಲಿಯನ್ ಮೊಬೈಲ್ಗಳನ್ನು ಉತ್ಪಾದಿಸಿ ರಫ್ತು ಮಾಡಿದೆ. ನಮ್ಮ ಉತ್ಪಾದನಾ ವಲಯ ವೇಗ ಪಡೆದುಕೊಳ್ಳುತ್ತಿದೆ. ಪ್ರತಿಯೊಂದು ಉತ್ಪನ್ನ ಭಾರತದ ಬ್ರ್ಯಾಂಡ್ ಆಗಲಿದೆ.. ಕೋವಿಡ್ ಕಾಲದಲ್ಲೂ ಸಾಕಷ್ಟು ಸಾರ್ಟ್ ಅಪ್ಗಳು ಬಂದಿದೆ
ಸ್ಟಾರ್ಟ್ ಅಪ್ಗಳಿಗೆ ಸಂಪೂರ್ಣ ಬೆಂಬಲ, ಪ್ರೋತ್ಸಾಹ ನೀಡಲಾಗುವುದು. ಆರ್ಥಿಕ ಅಭಿವೃದ್ಧಿಗೆ ರಾಜಕೀಯ ಹಿತಾಸಕ್ತಿ ಮುಖ್ಯವಾಗಿದೆ. ಭಾರತದ ಉತ್ಪಾದಕರ ಜೊತೆ ಇದೆ. ಬೇಡದ ಕಾನೂನುಗಳನ್ನು ತೆಗೆದು ಹಾಕುತ್ತೇವೆ. ಈಗಾಗಲೇ 15 ಸಾವಿರ ಕಾನೂನುಗಳನ್ನು ತೆಗೆದು ಹಾಕಲಾಗಿದೆ. 200 ವರ್ಷಗಳ ಹಿಂದೆ ದೇಶದಲ್ಲಿ ಒಂದು ಕಾನೂನು ಇತ್ತು. ಆಗ ನಮ್ಮ ದೇಶದಲ್ಲಿ ನಕ್ಷೆ ಮಾಡುವ ಅಧಿಕಾರ ಇರಲಿಲ್ಲ. ಈಗ ಎಲ್ಲರ ನಕಾಶೆ ಜನರ ಕೈಯಲ್ಲೇ ಇರುತ್ತದೆ ಎಂದರು.
ಸೇನಾ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಅನುಮತಿ ನೀಡಬೇಕು. ಹೆಣ್ಣು ಮಕ್ಕಳಿಗೆ ಸೇನಾ ಶಾಲೆಗಳ ಬಾಗಿಲು ತೆರೆದಿದೆ. ಇನ್ನು ದೇಶದ ಭದ್ರತೆಗೆ ಪ್ರಾಮುಖ್ಯತೆ ನೀಡಿದಂತೆ ದೇಶದ ಪರಿಸರ ರಕ್ಷಣೆಗೂ ಪ್ರಾಮುಖ್ಯತೆ ನೀಡಬೇಕು.
ಇಂಧನಕ್ಕಾಗಿ ವರ್ಷಕ್ಕೆ 12 ಲಕ್ಷ ಖರ್ಚು ಮಾಡಲಾಗುತ್ತಿದೆ. ಭಾರತದ ಇಂಧನ ಸ್ವಾವಲಂಬಿಯಾಗಬೇಕಿದೆ. 100ನೇ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ದೇಶವು ಇಂಧನದಲ್ಲಿ ಸ್ವಾವಲಂಬಿಯಾಗಬೇಕಿದೆ.
2030 ಹೊತ್ತಿಗೆ ರೈಲ್ವೆಯಲ್ಲಿ ಶೂನ್ಯ ಮಾಲಿನ್ಯ ನಿರ್ಮಾಣ ಮಾಡಲು ಪಣ ತೊಡಲಾಗಿದೆ. ನ್ಯಾಷನಲ್ ಹೈಡ್ರೋಜನ್ ಘೋಷಣೆ ಮಾಡುತ್ತಿದ್ದೇನೆ. ಈ ತ್ರಿವರ್ಣ ಧ್ವಜ ಸಾಕ್ಷಿಯಾಗಿಟ್ಟು ಘೋಷಣೆ ಮಾಡುತ್ತಿದ್ದೇನೆ. ಭಾರತವನ್ನು ಹೈಡ್ರೋಜನ್ ರಫ್ತು ಮಾಡುವ ಹಬ್ ಮಾಡಲಾಗುತ್ತದೆ.
ಏರ್ ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ ಮೂಲಕ ವೈರಿಗಳಿಗೆ ಉತ್ತರ ನೀಡಲಾಗಿದೆ. ವೈರಿಗಳಿಗೆ ಭಾರತದ ಶಕ್ತಿಯನ್ನು ತೋರಿಸಿದ್ದೇವೆ. ಭಾರತ ಭಯೋತ್ಪಾದನೆ ಮತ್ತು ವಿಸ್ತಾರವಾದದ ವಿರುದ್ಧ ಹೋರಾಟ ಮಾಡುತ್ತಿದೆ.
ರಕ್ಷಣಾ ವಿಭಾಗದಲ್ಲಿ ಆತ್ಮನಿರ್ಭರಕ್ಕೆ ಉತ್ತೇಜನ ನೀಡಬೇಕು. ಭಾರತದ ಕಂಪನಿಗಳಿಗೆ ಉತ್ತೇಜನ ನೀಡಬೇಕು. ಜಲ ಸಂರಕ್ಷಣಾ ಅಭಿಯಾನದ ಮೂಲಕ ನೀರಿನ ರಕ್ಷಣೆ ಮಾಡಬೇಕು ಎಂದು ಮೋದಿ ಕರೆ ನೀಡಿದರು.