Advertisement

ಯುರೋಪ್‌ ಪ್ರವಾಸಕ್ಕೆ ಭಾರತ ಹಾಕಿ ತಂಡ ಪ್ರಕಟ

07:30 AM Jul 29, 2017 | Harsha Rao |

ಹೊಸದಿಲ್ಲಿ: ಮುಂದಿನ ತಿಂಗಳು ಬೆಲ್ಜಿಯಂ ಮತ್ತು ಹಾಲೆಂಡಿಗೆ ಪ್ರವಾಸಗೈಯುವ ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತೀಯ ಹಾಕಿ ತಂಡದಲ್ಲಿ ಆರು ಮಂದಿ ಹೊಸಬರನ್ನು ಹೆಸರಿಸಲಾಗಿದೆ. 

Advertisement

ಬೂಮ್‌ನಲ್ಲಿ ಆ. 9ರಂದು ಬೆಲ್ಜಿಯಂ ತಂಡವನ್ನು ಎದುರಿಸುವ ಮೂಲಕ ಭಾರತೀಯ ತಂಡದ ಯುರೋಪ್‌ ಪ್ರವಾಸ ಆರಂಭಗೊಳ್ಳಲಿದೆ. ಚಿಂಗ್‌ಲೆನ್ಸಾನ ಸಿಂಗ್‌ ಉಪನಾಯಕರಾಗಿ ಮನ್‌ಪ್ರೀತ್‌ಗೆ ನೆರವಾಗಲಿದ್ದಾರೆ. ವಿಶ್ವ ಲೀಗ್‌ ಸೆಮಿಫೈನಲ್‌ನಲ್ಲಿ ಭಾಗವಹಿಸಿದ್ದ ಕೆಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.

ಗೋಲ್‌ಕೀಪರಲ್‌ ಸೂರಜ್‌ ಕರ್ಕೇರ, ಜೂನಿಯರ್‌ ವಿಶ್ವಕಪ್‌ ಹೀರೋಗಳಾದ ವರುಣ್‌ ಕುಮಾರ್‌, ದಿಪ್ಸನ್‌ ತಿರ್ಕಿ, ನೀಲಕಂಠ ಶರ್ಮ, ಗುರ್ಜಾಂತ್‌ ಸಿಂಗ್‌ ಮತ್ತು ಅರ್ಮಾನ್‌ ಕುರೇಶಿ ತಂಡಕ್ಕೆ ಆಯ್ಕೆ ಯಾದ ಆರು ಮಂದಿ ಹೊಸಬ ರಾಗಿದ್ದಾರೆ. ಗಾಯದಿಂದಾಗಿ ಗೋಲ್‌ಕೀಪರ್‌ ಸೂರಜ್‌ ಈ ವರ್ಷದ ಆರಂಭದಲ್ಲಿ ನಡೆದ ಅಜ್ಲಾನ್‌ ಷಾ ಕಪ್‌ ಹಾಕಿ ಕೂಟದಲ್ಲಿ ಭಾಗವಹಿಸಿರಲಿಲ್ಲ.

2017ರ ಎಚ್‌ಐಎಲ್‌ ವಿಜೇತ ಕಲಿಂಗ ಲ್ಯಾನ್ಸರ್ ಪರ ಅಮೋಘ ನಿರ್ವಹಣೆ ನೀಡಿದ್ದ ಅನುಭವಿ ಡಿಫೆಂಡರ್‌ ಮತ್ತು ಡ್ರ್ಯಾಗ್‌ಫ್ಲಿಕರ್‌ ಅಮಿತ್‌ ರೋಹಿದಾಸ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next