Advertisement

94 ದೇಶಗಳಿಗೆ 723 ಕೋಟಿ ಡೋಸ್‌ ಲಸಿಕೆ; ರಾಜ್ಯಸಭೆಗೆ ಕೇಂದ್ರ ಸರಕಾರದ ಮಾಹಿತಿ

12:26 AM Dec 08, 2021 | Team Udayavani |

ಹೊಸದಿಲ್ಲಿ: “ವ್ಯಾಕ್ಸಿನ್‌ ಮೈತ್ರಿ’ ಯೋಜನೆ ವ್ಯಾಪ್ತಿಯಲ್ಲಿ 94 ದೇಶಗಳಿಗೆ ಕೇಂದ್ರ ಸರಕಾರ 723 ಡೋಸ್‌ ಲಸಿಕೆ ಪೂರೈಕೆ ಮಾಡಿದೆ. ಇದರ ಜತೆಗೆ 150 ದೇಶ ಗಳಿಗೆ ಕೊರೊನಾಕ್ಕೆ ಸಂಬಂಧಿಸಿದಂತೆ ಹಲವು ವೈದ್ಯಕೀಯ ನೆರವು ನೀಡಿದೆ ಎಂದು ಸರಕಾರ ಹೇಳಿದೆ.

Advertisement

ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಹಾಯಕ ಸಚಿವೆ ಭಾರತೀ ಪ್ರವೀಣ್‌ ಪವಾರ್‌ ಹೇಳಿದ್ದಾರೆ. 100 ಕೋಟಿ ಡೋಸ್‌ ಲಸಿಕೆ ಪೂರೈಸಿದ ಸಾಧನೆಗಾಗಿ ದೇಶದ ವಿವಿಧೆಡೆ ಬ್ಯಾನರ್‌, ಹೋರ್ಡಿಂ ಗ್‌ಗಳನ್ನೂ ಹಾಕಲಾಗಿದೆ. ನ.27ಕ್ಕೆ ಮುಕ್ತಾಯವಾದಂತೆ ಲಸಿಕೆ ಖರೀದಿ-ವಿತರಣೆ ನಿಟ್ಟಿನಲ್ಲಿ 19, 675.46 ಕೋಟಿ ರೂ. ಮೊತ್ತವನ್ನು ಸರಕಾರ ವಿನಿಯೋಗಿಸಿದೆ.

ನಡೆಯದ ಕಲಾಪ: ರಾಜ್ಯಸಭೆಯಲ್ಲಿ ಮಂಗಳವಾರ ಸುಗಮವಾಗಿ ಕಲಾಪ ನಡೆ ದಿಲ್ಲ. 12 ಮಂದಿ ಸಂಸದರನ್ನು ಅಮಾನತು ಮಾಡಿದ ವಿಚಾರದಲ್ಲಿ ಪ್ರತಿಭಟನೆ ಮುಂದು ವರಿದಿದೆ. ಹೀಗಾಗಿ ಪದೇ ಪದೆ ಕಲಾಪ ಮುಂದೂಡ ಬೇಕಾಯಿತು. ಅಂತಿ ಮ ವಾಗಿ ಉಪ-ಸಭಾಪತಿ ಹರಿ ವಂಶ ನಾರಾಯಣ ಸಿಂಗ್‌ ಅವರು ಬುಧವಾರಕ್ಕೆ ಕಲಾಪ ಮುಂದೂಡಿದರು. ಅದಕ್ಕಿಂತ ಮೊದಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್‌ ಮಾಂಡವಿಯಾಗೆ ಬೆಂಬಲಿತ ಸಂತಾ ನೋತ್ಪತ್ತಿ ತಂತ್ರಜ್ಞಾನ ಮಸೂದೆಯನ್ನು ಮಂಡಿಸುವಂತೆ ಸೂಚನೆ ನೀಡಿದರು.

ಪರಿಹಾರಕ್ಕೆ ಒತ್ತಾಯ: ರೈತ ಕಾಯ್ದೆಗಳನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆಗಳ ಅವಧಿಯಲ್ಲಿ ಅಸುನೀಗಿದ ರೈತರ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ, ನಗದು ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ. ಶೂನ್ಯವೇಳೆಯಲ್ಲಿ ಮಾತ ನಾಡಿದ ಅವರು, ಅಸುನೀಗಿದ ರೈತರ ಬಗ್ಗೆ ದಾಖಲೆಗಳನ್ನು ಇರಿಸದ ಕೇಂದ್ರದ ಕ್ರಮವನ್ನು ಟೀಕಿಸಿದ್ದಾರೆ. ಪಂಜಾಬ್‌ ಸರಕಾರ ಮಾತ್ರ 400 ರೈತ ಕುಟುಂಬ ಗಳಿಗೆ 5 ತಲಾ 5 ಲಕ್ಷ ರೂ. ಪರಿಹಾರ ನೀಡಿದೆ ಮತ್ತು 150 ಮಂದಿಗೆ ಉದ್ಯೋಗ ನೀಡಿದೆ ಎಂದರು.

ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!

Advertisement

ಜನಗಗಣತಿ ಮುಂದೂಡಿಕೆ: ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಕೈಗೊಳ್ಳಬೇಕಾ ಗಿದ್ದ ಜನಗಣತಿಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ತಿಳಿಸಿದ್ದಾರೆ. ದೇಶಾ ದ್ಯಂತ ಈ ಉದ್ದೇಶಕ್ಕಾಗಿ 372 ಅಧಿ ಕಾರಿಗಳನ್ನು ನೇಮಿಸಲಾಗಿದೆ ಎಂದಿದ್ದಾರೆ.

2 ಸಾವಿರ ನೋಟು ಚಲಾವಣೆ ಇಳಿಕೆ
2 ಸಾವಿರ ರೂ.ನೋಟಿನ ಚಲಾವಣೆ, ಒಟ್ಟು ನೋಟುಗಳ ಚಲಾವಣೆ ಪೈಕಿ ಶೇ.1.75ಕ್ಕೆ ಇಳಿಕೆಯಾಗಿದೆ. 2018ರ ಮಾರ್ಚ್‌ಗೆ ಹೋಲಿಕೆ ಮಾಡಿದರೆ ಶೇ.3.27ಕ್ಕೆ ಇಳಿಕೆ ಯಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್‌ ಚೌಧರಿ ರಾಜ್ಯ ಸಭೆಗೆ ತಿಳಿಸಿದ್ದಾರೆ. ಸದ್ಯ ದೇಶದಲ್ಲಿ 2 ಸಾವಿರ ನೋಟುಗಳ ಸಂಖ್ಯೆ 223.3 ಕೋಟಿಗೆ ಇಳಿಕೆಯಾಗಿದೆ. 2018ರ ಮಾರ್ಚ್‌ನಲ್ಲಿ 336 .3 ಕೋಟಿ ಇತ್ತು. 2018-19ನೇ ಸಾಲಿನ ಬಳಿಕ ಹೊಸದಾಗಿ 2 ಸಾವಿರ ರೂ. ನೋಟುಗಳ ಮುದ್ರಣಕ್ಕೆ ಕ್ರಮ ಕೈಗೊ ಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಅರ್ಥ ವ್ಯವಸ್ಥೆಯ ಹಲವು ಬೆಳವಣಿಗೆ ಗಳನ್ನು ಆಧರಿಸಿ ನೋಟುಗಳ ಬೇಡಿಕೆ ಯಲ್ಲಿ ಏರಿಳಿಕೆ ಯಾಗುತ್ತದೆ. ಜತೆಗೆ ಬಡ್ಡಿ ದರದಲ್ಲಿಯೂ ಏರಿಳಿತ ಉಂಟಾಗುತ್ತದೆ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next