Advertisement

India ಅವಧಿಪೂರ್ವ ಜನನ ಭಾರತದಲ್ಲೇ ಹೆಚ್ಚು

09:48 PM Oct 09, 2023 | Team Udayavani |

ನವದೆಹಲಿ:ಭಾರತದಲ್ಲಿ 2020ರಲ್ಲಿ 30.2 ಲಕ್ಷ ಶಿಶುಗಳು ಅವಧಿಗೆ ಮುನ್ನವೇ ಜನಿಸಿದ್ದು, ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಅವಧಿಪೂರ್ವ ಜನನ ಭಾರತದಲ್ಲೇ ಹೆಚ್ಚು(ಶೇ.20) ಎಂದು ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂ ಎಚ್‌ಒ) ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಈ ವರದಿಗೆ ಯುನಿಸೆಫ್, ಲಂಡನ್‌ ಸ್ಕೂಲ್‌ ಆಫ್ ಹೈಜೀನ್‌ ಆ್ಯಂಡ್‌ ಟ್ರಾಪಿಕಲ್‌ ಮೆಡಿಸಿನ್‌ ಸಹಯೋಗ ನೀಡಿವೆ.

ಪಾಕಿಸ್ತಾನ, ನೈಜೀರಿಯಾ, ಚೀನಾ, ಇಥಿಯೋಪಿಯಾ, ಬಾಂಗ್ಲಾದೇಶ, ಡೆಮಾಕ್ರಾಟಿಕ್‌ ರಿಪಬ್ಲಿಕ್‌ ಆಫ್ ಕಾಂಗೋ ಮತ್ತು ಅಮೆರಿಕವು ಭಾರತದ ನಂತರದ ಸ್ಥಾನಗಳಲ್ಲಿ ಇವೆ. ಹೆಚ್ಚಿನ ಪ್ರಮಾಣದ ಜನಸಂಖ್ಯೆ, ಅವರಿಗೆ ನೀಡಲಾಗುತ್ತಿರುವ ಆರೋಗ್ಯ ವ್ಯವಸ್ಥೆ, ಸರಿಯಾದ ರೀತಿಯಲ್ಲಿ ಕುಟುಂಬ ಯೋಜನೆಯನ್ನು ಅನುಷ್ಠಾನ ಮಾಡದೇ ಇರುವುದು ಅವಧಿ ಪೂರ್ವ ಶಿಶುಗಳ ಜನನಕ್ಕೆ ಕಾರಣ ಎಂದು ಕಾರಣಗಳನ್ನು ಗುರುತಿಸಲಾಗಿದೆ.

2020ರಲ್ಲಿ ಜಗತ್ತಿನಾದ್ಯಂತ 1.34 ಕೋಟಿ ಮಕ್ಕಳು ಅವಧಿಪೂರ್ವವಾಗಿ ಜನಿಸಿದ್ದವು. ಈ ಪೈಕಿ 10 ಲಕ್ಷ ಶಿಶುಗಳು ಜನನದ ಹಂತದಲ್ಲಿಯೇ ಸಾವನ್ನಪ್ಪುತ್ತವೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next