Advertisement

ಭಾರತದ ತಿರುಗೇಟು; 60 ಸೆಕೆಂಡ್ಸ್ ನಲ್ಲಿ ಪಾಕ್ ಬಂಕರ್ ಉಡೀಸ್! watch

11:33 AM May 08, 2017 | Team Udayavani |

ನವದೆಹಲಿ: ಕಳೆದ ವಾರ ಭಾರತದ ಇಬ್ಬರು ಸೈನಿಕರನ್ನು ಹತ್ಯೆಗೈದು ದೇಹವನ್ನು ವಿರೂಪಗೊಳಿಸಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಎಂಬಂತೆ  ಪಾಕಿಸ್ತಾನದ ಗಡಿಭಾಗದಲ್ಲಿದ್ದ 2 ಬಂಕರ್ ಗಳನ್ನು ಮಿಸೈಲ್ ದಾಳಿ ನಡೆಸಿ ಭಾರತೀಯ ಮಿಲಿಟರಿ ಪಡೆ ಚಿಂದಿ ಉಡಾಯಿಸಿರುವ ಘಟನೆ ಸೋಮವಾರ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಇಂಡಿಯಾ ಟುಡೇಗೆ ಲಭ್ಯವಾಗಿರುವ ಎಕ್ಸ್ ಕ್ಲೂಸಿವ್ ವಿಡಿಯೋ ಫೂಟೇಜ್ ಪ್ರಸಾರ ಮಾಡಿದೆ. ಜಮ್ಮು ಕಾಶ್ಮೀರ ಸಮೀಪದ ಪೂಂಚ್ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್ ನಿಂದ ಗಡಿಭಾಗದಲ್ಲಿದ್ದ ಪಾಕಿಸ್ತಾನದ ಬಂಕರ್ ಮೇಲೆ ಮಿಸೈಲ್ ದಾಳಿ ನಡೆಸಿ 60 ಸೆಕೆಂಡ್ ನೊಳಗೆ ನಾಶ ಮಾಡಿರುವುದಾಗಿ ವರದಿ ವಿವರಿಸಿದೆ.

ಮಿಸೈಲ್ ದಾಳಿ ಯಶಸ್ವಿಯಾಗಿರುವುದಾಗಿ ಭಾರತದ ಯೋಧರು ಸಂತಸವ್ಯಕ್ತಪಡಿಸಿದ್ದಾರೆ. ಸರ್…ನಮ್ಮ ಮಿಸೈಲ್ ಗುರಿ ತಲುಪಿದೆ. ನಾವು ಬಂಕರ್ ಅನ್ನು ನಾಶ ಮಾಡಿದ್ದೇವೆ ಎಂದು ಯೋಧರೊಬ್ಬರು ಹೇಳುತ್ತಿರುವ ಧ್ವನಿ ವಿಡಿಯೋದಲ್ಲಿ ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಟ್ಯಾಂಕ್ ನಿರೋಧಕ ಮಿಸೈಲ್ ಬಳಸಿ ಪಾಕಿಸ್ತಾನದ  ಬಂಕರ್ ನಾಶ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ. ಇದು ಕಳೆದ ತಿಂಗಳು ನಡೆದ ಘಟನೆಯಾಗಿದ್ದು, ಯಾವ ಪ್ರದೇಶ ಎಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ಹೇಳಿದೆ. ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡುವ ನಿಟ್ಟಿನಲ್ಲಿ ಪಾಕ್ ಬಂಕರ್ ಮೇಲೆ ದಾಳಿ ನಡೆಸಿರುವ ವಿಡಿಯೋ ಇದಾಗಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next