Advertisement

ಯುಎನ್‌ಎಸ್‌ಸಿಗೆ ಭಾರತ: ಫ್ರಾನ್ಸ್‌ ಪ್ರಯತ್ನ

05:18 AM May 08, 2019 | Team Udayavani |

ವಿಶ್ವಸಂಸ್ಥೆ: ಭಾರತ, ಜರ್ಮನಿ, ಬ್ರೆಜಿಲ್ ಮತ್ತು ಜಪಾನ್‌ನಂಥ ದೇಶಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್‌ಎಸ್‌ಸಿ) ಸೇರಿಸುವುದರಿಂದ ವಿವಿಧ ಖಂಡಗಳಲ್ಲಿರುವ ನೈಜ ವಾಸ್ತವತೆಗೆ ಸೂಕ್ತ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದು ಫ್ರಾನ್ಸ್‌ನ ನಿಯೋಗವೊಂದು ವಿಶ್ವಸಂಸ್ಥೆಗೆ ತಿಳಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿಶ್ವಸಂಸ್ಥೆಯಲ್ಲಿನ ಫ್ರಾನ್ಸ್‌ನ ಶಾಶ್ವತ ರಾಯಭಾರಿಯಾಗಿರುವ ಫ್ರಾನ್‌ ಓಸಿಸ್‌ ಡೆಲಾಟ್ರೆ, ವಿಸ್ತರಿಸಲ್ಪಟ್ಟಿರುವ ಯುಎನ್‌ಎಸ್‌ಸಿ ಭದ್ರತಾ ಸಮಿತಿಯಲ್ಲಿ ಈ ದೇಶಗಳಿಗೆ ಸ್ಥಾನ ಕಲ್ಪಿಸಲು ಪ್ರಯತ್ನಿಸುವುದಕ್ಕೆ ತಾನು ಮೊದಲ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next