Advertisement

ಗಗನಯಾನಕ್ಕಾಗಿ ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಗಳ‌ ಒಪ್ಪಂದ

11:01 PM Apr 15, 2021 | Team Udayavani |

ನವದೆಹಲಿ: ಭಾರತದ ಮೊಟ್ಟಮೊದಲ ಮಾನವ ಸಹಿತ ಖಗೋಳಯಾತ್ರೆಯಾದ “ಗಗನಯಾನ’ ಅನುಷ್ಠಾನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹಾಗೂ ಫ್ರಾನ್ಸ್‌ ಬಾಹ್ಯಾಕಾಶ ಸಂಸ್ಥೆ (ಸಿಎನ್‌ಇಎಸ್‌) ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

Advertisement

ಗುರುವಾರದಂದು ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್‌-ಯೆಸ್‌ ಲಿ ಡ್ರಿಯಾನ್‌ ಈ ವಿಷಯ ತಿಳಿಸಿದ್ದಾರೆ.

ಒಪ್ಪಂದದ ಪ್ರಕಾರ, ಗಗನಯಾನದಲ್ಲಿ ಪಾಲ್ಗೊಳ್ಳುವ ಖಗೋಳಯಾತ್ರಿಗಳಿಗೆ ಫ್ರಾನ್ಸ್‌ ಬಾಹ್ಯಾಕಾಶ ಕೇಂದ್ರದಲ್ಲಿರುವ ಸಿಎಡಿಎಂಒಎಸ್‌ ಕೇಂದ್ರದಲ್ಲಿ ಮೈಕ್ರೋ ಗ್ರಾವಿಟಿಯಲ್ಲಿ ಕಾರ್ಯ ನಿರ್ವಹಿಸುವ ವಿಧಾನ ಮತ್ತಿತರ ವಿಚಾರಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.

ಇದನ್ನೂ ಓದಿ :ಚೀನಾ ಚಿತಾವಣೆಗಳಿಗೆ ಭಾರತ ಬಗ್ಗುವುದಿಲ್ಲ : ಬಿಪಿನ್‌ ರಾವತ್

Advertisement

Udayavani is now on Telegram. Click here to join our channel and stay updated with the latest news.

Next