Advertisement
ಈ ಟೆಂಡರ್ ಗೆಲ್ಲಲಿರುವ ವಿಶ್ವದ ಯಾವುದೇ ಯುದ್ಧ ವಿಮಾನ ತಯಾರಿಕಾ ಕಂಪೆನಿ ಭಾರತದಲ್ಲೇ ವಾಯುಪಡೆಗೆ ಬೇಕಾದ ಎಲ್ಲ ವಿಮಾನಗಳನ್ನೂ ತಯಾರಿಸಬೇಕಿದ್ದು, ಲಕ್ಷಾಂತರ ಕೋಟಿ ರೂ. ಮೌಲ್ಯದ ಈ ಒಪ್ಪಂದ ಪ್ರಧಾನಿ ಮೋದಿ ಆಶಯದ ‘ಮೇಕ್ ಇನ್ ಇಂಡಿಯಾ’ಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. ಅಲ್ಲದೆ, ಹೊಸ ವಿಮಾನಗಳ ಸೇರ್ಪಡೆಯಿಂದ ಸೇವಾವಧಿ ಮುಗಿದಿರುವ ‘ಮಿಗ್’ನಂಥ ಯುದ್ಧ ವಿಮಾನಗಳನ್ನು ನೇಪಥ್ಯಕ್ಕೆ ಸರಿಸುವ ಉದ್ದೇಶವನ್ನು ವಾಯುಪಡೆ ಹೊಂದಿದೆ.
2007ರಲ್ಲೇ ಪ್ರಕ್ರಿಯೆ ಶುರು: 2007ರಿಂದಲೇ ಭಾರತ ಸರಕಾರ ಯುದ್ಧ ವಿಮಾನಗಳನ್ನು ಖರೀದಿ ಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಆಗ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆಯಿಂದ 126 ರಾಫೆಲ್ ಜೆಟ್ ವಿಮಾನ ಖರೀದಿಸುವ 7,14,000 ಕೋಟಿ ರೂ. ಒಪ್ಪಂದಕ್ಕೆ ಭಾರತ ಸರಕಾರ ಸಹಿ ಹಾಕಿತ್ತು. ಆದರೆ ಹಾಲಿ ಎನ್‌ಡಿಎ ಸರಕಾರ ಆ ಒಪ್ಪಂದವನ್ನು 2015ರಲ್ಲಿ ರದ್ದುಗೊಳಿಸಿತು. ಅಲ್ಲದೆ, 2016ರಲ್ಲಿ ಫ್ರೆಂಚ್ ಸರಕಾರದ ಜತೆ ಒಪ್ಪಂದ ಮಾಡಿಕೊಂಡು 36 ರಾಫೆಲ್ ಜೆಟ್ ವಿಮಾನಗಳನ್ನು ಪ್ರತ್ಯೇಕವಾಗಿ ಖರೀದಿಸಲು ನಿರ್ಧರಿಸಿತ್ತು.