Advertisement

ಭಾರತ-ಫಿನ್ಲಂಡ್‌ ಡೇವಿಸ್‌ ಕಪ್‌ ಟೆನಿಸ್‌ ಮುಂದೂಡಿಕೆ

10:56 PM Jun 27, 2020 | Sriram |

ಹೊಸದಿಲ್ಲಿ: ಕೊನೆಗೂ ಭಾರತ-ಫಿನ್ಲಂಡ್‌ ನಡುವಿನ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿಯನ್ನು 2021ಕ್ಕೆ ಮುಂದೂಡಲಾಗಿದೆ. ಕೋವಿಡ್‌-19 ಕಾರಣದಿಂದ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ (ಐಟಿಎಫ್) ತನ್ನೆಲ್ಲ ಟೆನಿಸ್‌ ಕೂಟಗಳನ್ನು ಮುಂದೂಡಿದ ಕಾರಣ ಈ ನಿರ್ಧಾರಕ್ಕೆ ಬರಬೇಕಾಯಿತು.

Advertisement

ಭಾರತ ತಂಡ ವರ್ಲ್ಡ್ ಗ್ರೂಪ್‌1 ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಸೆಪ್ಟಂಬರ್‌ನಲ್ಲಿ ಫಿನ್ಲಂಡಿಗೆ ತೆರಳಬೇಕಿತ್ತು. ಇದಕ್ಕೂ ಹಿಂದಿನ ಡೇವಿಸ್‌ ಕಪ್‌ ಅರ್ಹತಾ ಪಂದ್ಯಾವಳಿಯಲ್ಲಿ ಭಾರತ 1-3 ಅಂತರದಿಂದ ಕ್ರೊವೇಶಿಯಾಕ್ಕೆ ಶರಣಾಗಿತ್ತು. ಇನ್ನೊಂದೆಡೆ ವರ್ಲ್ಡ್ ಗ್ರೂಪ್‌ ಪ್ಲೇ-ಆಫ್ ಸ್ಪರ್ಧೆಯಲ್ಲಿ ಫಿನ್ಲಂಡ್‌ 3-2ರಿಂದ ಮೆಕ್ಸಿಕೊಗೆ ಸೋಲುಣಿಸಿತ್ತು.

ಭಾರತಕ್ಕೆ ಫಿನ್ಲಂಡ್‌ ಸುಲಭ ಎದುರಾಳಿ ಎಂದೇ ಭಾವಿಸಲಾಗಿದೆ. ಇಲ್ಲಿನ ಯಾವ ಟೆನಿಸಿಗರೂ ಅಗ್ರ ನೂರರ ರ್‍ಯಾಂಕಿಂಗ್‌ ಯಾದಿಯಲ್ಲಿಲ್ಲ. 101ನೇ ಸ್ಥಾನದಲ್ಲಿರುವ ಎಮಿಲ್‌ ರುಸುವೂರಿ ಅವರದೇ ಅತ್ಯುತ್ತಮ ರ್‍ಯಾಂಕಿಂಗ್‌ ಆಗಿದೆ. ಉಳಿದವರು ಅಗ್ರ 400ರ ಯಾದಿಯಲ್ಲೂ ಇಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next