Advertisement
ಆಸೀಸ್ ನೀಡಿದ 407 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 131 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತು. ಇದರೊಂದಿಗೆ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
Related Articles
Advertisement
ಪಂತ್ ಅಬ್ಬರ
ಇದಕ್ಕೂ ಮೊದಲು ಬ್ಯಾಟಿಂಗ್ ಭಡ್ತಿ ಪಡೆದ ಪಂತ್ ಉತ್ತಮ ಇನ್ನಿಂಗ್ ಆಡಿದರು. ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಪಂತ್ 97 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಮೂರು ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದ ಪಂತ್ ಶತಕದ ಹೊಸ್ತಿಲಲ್ಲಿ ಎಡವಿದರು.
ಪಂತ್ ಮತ್ತು ಪೂಜಾರ ಶತಕದ ಜೊತೆಯಾಟವಾಡಿದರು. ರಕ್ಷಾಣಾತ್ಮಕವಾಗಿ ಆಡಿದ ಪೂಜಾರ 77 ರನ್ ಗಳಿಸಿ ಔಟಾದರು. ಇದೇ ವೇಳೆ ಪೂಜಾರ ಟೆಸ್ಟ್ ಕ್ರಿಕೆಟ್ ನಲ್ಲಿ ಆರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದಿದೆ. ಮುಂದಿನ ಪಂದ್ಯ ಬ್ರಿಸ್ಬೇನ್ ನಲ್ಲಿ ನಡೆಯಲಿದೆ.