Advertisement
ಭಾರತ ವೀಸಾ ನಿರಾಕರಿಸಿರುವುದು ಐಒಸಿ ನಿಯಮಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ಭಾರತ ಭವಿಷ್ಯದಲ್ಲಿ ಪ್ರಮುಖ ಕೂಟಗಳ ಆತಿಥ್ಯ ವಹಿಸಲು ಬಯಸಿದಲ್ಲಿ, ಎಲ್ಲ ದೇಶಗಳ ಎಲ್ಲ ಆಟಗಾರರಿಗೂ ಪ್ರವೇಶ ನೀಡುವುದಾಗಿ ಲಿಖೀತ ಭರವಸೆ ನೀಡಬೇಕು ಎಂದು ಐಒಸಿ ಹೇಳಿದೆ. ಇದು ಒಲಿಂಪಿಕ್ಸ್ ಆಯೋಜಿಸುವ ಭಾರತದ ಕನಸಿಗೆ ಅಡ್ಡಿಯಾಗಿದೆ. ಭಾರತ 2026ರ ಯುವ ಒಲಿಂಪಿಕ್ಸ್, 2032ರ ಒಲಿಂಪಿಕ್ಸ್, 2030ರ ಏಶ್ಯನ್ ಗೇಮ್ಸ್ ಆಯೋಜಿಸುವ ಯೋಜನೆ ಹೊಂದಿತ್ತು. ಇದಕ್ಕೆ ವೀಸಾ ನಿರಾಕರಣೆಯ ವಿದ್ಯಮಾನ ಅಡ್ಡಿಯಾಗಿದೆ.
ಶೂಟಿಂಗ್ ವಿಶ್ವಕಪ್‌ನ 2 ಒಲಿಂಪಿಕ್ಸ್ ಅರ್ಹತಾ ಸ್ಥಾನಗಳನ್ನು ಐಒಸಿ ರದ್ದುಗೊಳಿಸಿದೆ. ಈ ವಿಶ್ವಕಪ್ ಮೂಲಕ 16 ಶೂಟರ್‌ಗಳು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಬಹುದಿತ್ತು. ಈಗ 14ಕ್ಕೆ ಇಳಿ ದಿದೆ. ಪಾಕಿಸ್ಥಾನದ ಇಬ್ಬರು ಶೂಟರ್‌ಗಳು ಭಾರತಕ್ಕೆ ಬರದಿರುವುದರಿಂದ, ಅವರು ಪಾಲ್ಗೊಳ್ಳಬಯಸಿದ್ದ ರ್ಯಾಪಿಡ್ ಫೈರ್ ವಿಭಾಗದ ಕೋಟಾವನ್ನು ಕೈಬಿಡಲಾಗಿದೆ. ಈ ವಿಭಾಗದಲ್ಲಿ ಸ್ಪರ್ಧಿಸುವ ಭಾರತೀಯರಿಗೂ ಸಮಸ್ಯೆಯಾಗಿದೆ.