Advertisement

35 ದಿನಗಳಲ್ಲಿ 10 ಕ್ಷಿಪಣಿ ಪರೀಕ್ಷೆ

12:16 AM Oct 11, 2020 | mahesh |

ಹೊಸದಿಲ್ಲಿ: ಎಲ್‌ಎಸಿಯಲ್ಲಿ ಹಿಂದಡಿ ಇಡಲು ಮೀನಮೇಷ ಎಣಿಸುತ್ತಿ ರುವ ಚೀನಕ್ಕೀಗ “ಕ್ಷಿಪಣಿ ಭಯ’ ಎದುರಾ ಗಿದೆ. ಗಡಿ ಬಿಕ್ಕಟ್ಟಿನ ನಡುವೆಯೇ ಭಾರತ ಕಳೆದ 35 ದಿನಗಳಲ್ಲಿ 10 ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿ ಬೀಜಿಂಗ್‌ಗೆ ಸ್ಪಷ್ಟ ಸಂದೇಶ ರವಾನಿಸಿದೆ.

Advertisement

ಇವೆಲ್ಲದರ ನಡುವೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಮಿತ “ನಿರ್ಭಯ್‌’ ಸೂಪರ್‌ ಸಾನಿಕ್‌ ನೌಕಾಕ್ಷಿಪಣಿ ಪರೀಕ್ಷೆಗೂ ಮುಂದಿನ ವಾರದ ಆರಂಭದಲ್ಲಿ ಮುಹೂರ್ತ ನಿಗದಿಯಾಗಿದೆ. ಇದು ಕ್ಷಿಪಣಿಗೆ 7ನೇ ಮತ್ತು ಅಂತಿಮ ಪರೀಕ್ಷೆ. ಯಶಸ್ವಿಯಾದರೆ ಎಲ್‌ಎಸಿಯ ಮುಂಚೂಣಿ ನೆಲೆಗಳಿಗೆ ನಿಯೋಜಿಸು ವುದು ಖಚಿತ ಎನ್ನಲಾಗುತ್ತಿದೆ. ಇದು ನೌಕಾಪಡೆ, ಭೂಸೇನೆ ಬಳಕೆಗೂ ಸೈ ಎನ್ನಿಸಿಕೊಂಡಿದೆ.

ಈ ಕ್ಷಿಪಣಿ ಏಕಕಾಲದಲ್ಲಿ ನಿರ್ದಿಷ್ಟ ಗುರಿಯ ಶೇ. 90ರಷ್ಟು ಪ್ರದೇಶಗಳನ್ನು ಆಕ್ರಮಿಸಬಲ್ಲದು. 24 ವಿವಿಧ ಸಿಡಿತಲೆಗಳ ಮೂಲಕ 800 ಕಿ.ಮೀ. ವಿಸ್ತಾರದವರೆಗೆ ದಾಳಿ ನಡೆಸಬಲ್ಲದು. 0.7 ಮ್ಯಾಕ್‌ ವೇಗ, 400 ಕಿ.ಮೀ. ದೂರದಲ್ಲಿರುವ ಗುರಿಯ ಹುಟ್ಟಡಗಿಸಬಲ್ಲದು.

ನೂತನ ರಾಕೆಟ್‌ ಚಿಮ್ಮಿಸಲು ಸಜ್ಜಾದ ಇಸ್ರೋ
ಗಡಿ ಅಷ್ಟೇ ಅಲ್ಲ. ಬಾಹ್ಯಾಕಾಶದ ಎಲ್ಲೆಗಳ ರಕ್ಷಣೆಗೂ ಭಾರತ ಮುಂದಾ ಗಿದೆ. ಮುಂದಿನ ತಿಂಗಳು “ಸ್ಮಾಲ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌’ (ಎಸ್‌ಎಸ್‌ಎಲ್‌ವಿ) ನೂತನ ರಾಕೆಟನ್ನು ಉಡಾಯಿಸಲು ಇಸ್ರೋ ಸನ್ನದ್ಧವಾಗಿದೆ. “ಎಸ್‌ಎಸ್‌ಎಲ್‌ವಿ ಉಡಾವಣೆ ಶ್ರೀಹರಿಕೋಟಾದಲ್ಲಿ ನಡೆಯಲಿದೆ. ಪಿಎಸ್‌ಎಲ್‌ವಿ ಸಿ-49 ಉಡ್ಡಯನ ವಾಹಕದ ಲಾಂಚ್‌ ಪ್ಯಾಡನ್ನು ಪುನರ್‌ ನಿರ್ಮಿಸಿ, ಎಸ್‌ಎಸ್‌ಎಲ್‌ವಿಗೆ ತಕ್ಕಂತೆ ರೂಪಿಸ
ಲಾಗಿದೆ. 34 ಮೀ. ಉದ್ದದ ರಾಕೆಟ್‌ 120 ಟನ್‌ ಹೊರುವ ಸಾಮರ್ಥ್ಯ ಹೊಂದಿದ್ದು, ಘನ ಇಂಧನ ಬಳಸಿ ಬಹುವಿಧದ ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಲಿದೆ’ ಎಂದು ಇಸ್ರೋ ಘಟಕ ವಿಕ್ರಮ್‌ ಸಾರಾಭಾç ಸ್ಪೇಸ್‌ ಸೆಂಟರ್‌ ನಿರ್ದೇಶಕ ಎಸ್‌. ಸೋಮನಾಥ್‌ ತಿಳಿಸಿದ್ದಾರೆ.

ಪ್ರತಿ 4 ದಿನಕ್ಕೊಂದು ಪರೀಕ್ಷೆ !
ಡಿಆರ್‌ಡಿಒ ಅತ್ಯಂತ ವೇಗದಲ್ಲಿ ತಾಂತ್ರಿಕ ಕೆಲಸಗಳನ್ನು ಚುರುಕುಗೊಳಿಸಿದೆ. “ಮೇಡ್‌ ಇನ್‌ ಇಂಡಿಯಾ’ದ ಫಾಸ್ಟ್‌ ಟ್ರ್ಯಾಕ್‌ನಲ್ಲಿ ಓಡುತ್ತಿರುವ ಡಿಆರ್‌ಡಿಒ, ನ್ಯೂಕ್ಲಿಯರ್‌ ಮತ್ತು ಸಾಂಪ್ರದಾಯಿಕ ಕ್ಷಿಪಣಿಗಳನ್ನು ಕಳೆದೊಂದು ತಿಂಗಳಿನಲ್ಲಿ ಪ್ರತಿ 4 ದಿನಕ್ಕೊಮ್ಮೆ ಪರೀಕ್ಷೆ ನಡೆಸಿದೆ. ಸದ್ಯ 9
ಕ್ಷಿಪಣಿ ಪರೀಕ್ಷೆಗಳಾಗಿದ್ದು, ಮುಂದಿನ ವಾರ ಮತ್ತೂಂದಕ್ಕೆ ಸಜ್ಜಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next