ನ್ಯೂಯಾರ್ಕ್: ಗಾಜಾಪಟ್ಟಿಯಲ್ಲಿ ತಕ್ಷಣವೇ ಕದನವಿರಾಮ ಘೋಷಿಸಬೇಕು ಎಂದು ಭಾರತ ಬುಧವಾರ (ಜುಲೈ 17) ವಿಶ್ವಸಂಸ್ಥೆಯಲ್ಲಿ ಕರೆ ನೀಡಿದ್ದು, ಯಾವುದೇ ಷರತ್ತುಗಳಿಲ್ಲದೇ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ತಿಳಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ(UNSC)ಯಲ್ಲಿ ಮಧ್ಯ ಏಷ್ಯಾದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಆರ್.ರವೀಂದ್ರ ಅವರು, ಪ್ಯಾಲೆಸ್ತೇನ್ ಅಭಿವೃದ್ಧಿಗೆ ಭಾರತವು ವಿವಿಧ ರೀತಿಯಲ್ಲಿ ನೆರವು ನೀಡಿದ್ದು, ಅದರ ಮೊತ್ತ ಅಂದಾಜು 120 ಮಿಲಿಯನ್ ಅಮೆರಿಕನ್ ಡಾಲರ್ ಎಂಬುದಾಗಿ ಹೇಳಿದರು.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಸೇರಿದಂತೆ ಎಲ್ಲಾ ದೇಶಗಳು ಬಲವಾಗಿ ಖಂಡಿಸಿವೆ. ಅದೇ ರೀತಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ನಾಗರಿಕರ ಪ್ರಾಣ ಹಾನಿಯನ್ನೂ ಖಂಡಿಸುವುದಾಗಿ ಭಾರತ ಹೇಳಿದ್ದು, ಕೂಡಲೇ ಕದನ ವಿರಾಮ ಘೋಷಿಸುವ ಮೂಲಕ ಮಾತುಕತೆಯಲ್ಲಿ ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಕರೆ ನೀಡಿದೆ.
ಗಾಜಾಪಟ್ಟಿಯಲ್ಲಿ ತಕ್ಷಣವೇ ಯುದ್ಧವನ್ನು ನಿಲ್ಲಿಸಿ, ಮಾನವೀಯ ನೆಲೆಯಲ್ಲಿ ನೆರವು ನೀಡಬೇಕೆಂಬುದು ಭಾರತದ ಆಶಯವಾಗಿದೆ. ಹಾಗೇ ಎಲ್ಲಾ ಒತ್ತೆಯಾಳುಗಳನ್ನು ಯಾವುದೇ ಷರತ್ತುಗಳಿಲ್ಲದೇ ಬಂಧಮುಕ್ತಗೊಳಿಸಬೇಕು ಎಂದು ರಾಯಭಾರಿ ರವೀಂದ್ರ ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:B’town: ವಿಚ್ಚೇದನ ಕುರಿತ ಪೋಸ್ಟ್‌ಗೆ ಲೈಕ್ ಕೊಟ್ಟ ಅಭಿಷೇಕ್ ಬಚ್ಚನ್; ಸಂಬಂಧದಲ್ಲಿ ಬಿರುಕು?