Advertisement
ಇಲ್ಲಿನ “ವೀರ್ ಬಹದ್ದೂರ್ ಸಿಂಗ್ ನ್ಪೋರ್ಟ್ಸ್ ಕಾಲೇಜ್ ಗ್ರೌಂಡ್’ನಲ್ಲಿ ನಡೆದ ಪಂದ್ಯದಲ್ಲಿ ಭಾರತ 3-2 ಗೋಲುಗಳ ಅಂತರದಿಂದ ಫ್ರಾನ್ಸ್ ತಂಡವನ್ನು ಉರುಳಿಸಿತು. ಭಾರತದ ಪರ ಮರಿಯಾನಾ ಕೌರ್ (19ನೇ ನಿಮಿಷ), ಲಾಲಿಮಿಯಾಮಿ (30ನೇ ನಿಮಿಷ) ಹಾಗೂ ಮಮ್ತಾಜ್ ಖಾನ್ (34ನೇ ನಿಮಿಷ) ಗೋಲು ಹೊಡೆದು ಗೆಲುವಿನ ರೂವಾರಿಗಳಾದರು. ಫ್ರಾನ್ಸ್ ತಂಡದ ಮೈಕೆಲಾ ಲಾಹ್ಲಾ (14ನೇ ನಿಮಿಷ) ಹಾಗೂ ಗೂಸೆj ವಾನ್ ಬೊಲುಯಿಸ್ (58ನೇ ನಿಮಷ) ಗೋಲು ಹೊಡೆದರು. ಇದು ಈ ಅಂಗಳದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.
ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ ದ್ವಿತೀಯ ಪಂದ್ಯದ ಆರಂಭದಲ್ಲೇ ಆಕ್ರಮಣ ಆಟಕ್ಕಿಳಿಯಿತು. ಆದರೆ ಭಾರತಕ್ಕೆ ತಕ್ಕ ಪೈಪೋಟಿ ನೀಡಿದ ಫ್ರಾನ್ಸ್ 14ನೇ ನಿಮಿಷದಲ್ಲಿ ಮೊದಲ ಗೋಲು ಹೊಡೆದು ಮುನ್ನಡೆ ಸಾಧಿಸಿತು. ದ್ವಿತೀಯ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ದಕ್ಕಿಸಿಕೊಂಡ ಭಾರತ 19ನೇ ನಿಮಿಷದಲ್ಲಿ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದಿತು. ದ್ವಿತೀಯ ಕ್ವಾರ್ಟರ್‌ನ ಕೊನೆಯಲ್ಲಿ ಮತ್ತೂಂದು ಗೋಲು ಬಾರಿಸಿದ ಭಾರತ 2-1 ಅಂತರದಿಂದ ಮುನ್ನಡೆ ಕಾಯ್ದಕೊಂಡಿತು. ಇದಾದ ನಾಲ್ಕೇ ನಿಮಿಷದಲ್ಲಿ ಮುಮ್ತಾಜ್ ಖಾನ್ 3ನೇ ಗೋಲು ಸಿಡಿಸಿದರು. 2 ಗೋಲುಗಳ ಹಿನ್ನಡೆಯಲ್ಲಿದ್ದ ಪ್ರವಾಸಿ ತಂಡ ಆಕ್ರಮಣ ಆಟಕ್ಕಿಳಿಯಿತಾದರೂ ಭಾರತದ ರಕ್ಷಣಾ ಪಡೆಯ ಮುಂದೆ ಮಂಕಾಯಿತು. ಆದರೆ ಪಂದ್ಯದ ಮುಕ್ತಾಯಕ್ಕೆ ಇನ್ನೇನು 2 ನಿಮಿಷ ಬಾಕಿ ಇರುವಾಗ ಗೋಲೊಂದನ್ನು ಬಾರಿಸಿದ ಫ್ರಾನ್ಸ್ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಂಡಿತು.4 ಪಂದ್ಯಗಳ ಸರಣಿಯ 3ನೇ ಪಂದ್ಯ ಮಂಗಳವಾರ ಲಕ್ನೋದಲ್ಲಿ ನಡೆಯಲಿದೆ.