ಹೊಸದಿಲ್ಲಿ: ಎಂಟು ವರ್ಷಗಳ ಹಿಂದೆ ಭಾರತದ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಆರಂಭಿಕ ಆಟಗಾರ್ತಿ ವಿ.ಆರ್. ವನಿತಾ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು.
ಮೂಲತಃ ಕರ್ನಾಟಕದವರಾದ ವೆಲ್ಲ ಸ್ವಾಮಿ ರಾಮು ವನಿತಾ 2014-16ರ ಅವಧಿಯಲ್ಲಿ ಭಾರತದ ಪರ 6 ಏಕದಿನ ಮತ್ತು 16 ಟಿ20 ಪಂದ್ಯಗಳನ್ನಾಡಿದ್ದರು. ಏಕದಿನದಲ್ಲಿ 85 ರನ್, ಟಿ20ಯಲ್ಲಿ 216 ರನ್ ಮಾಡಿದ್ದರು. 2014ರಲ್ಲಿ ಶ್ರೀಲಂಕಾ ವಿರುದ್ಧದ ವಿಶಾಖಪಟ್ಟಣ ಏಕದಿನ ಪಂದ್ಯದಲ್ಲಿ ಮೊದಲ ಸಲ ಭಾರತವನ್ನು ಪ್ರತಿನಿಧಿಸಿದ್ದರು.
ಸೋಮವಾರ ಟ್ವೀಟ್ ಮೂಲಕ ವನಿತಾ ತಮ್ಮ ವಿದಾಯವನ್ನು ಸಾರಿದರು. ತಂಡದ ಹಿರಿಯ ಆಟಗಾ ರರಾದ ಜೂಲನ್ ಮತ್ತು ಮಿಥಾಲಿಗೆ, ಕುಟುಂಬದ ಸದಸ್ಯರಿಗೆ, ಮೆಂಟರ್ ಹಾಗೂ ಗೆಳೆಯರಿಗೆಲ್ಲ ವನಿತಾ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್, ಯುಪಿ ಯೋಧ ಸೆಮಿಫೈನಲ್ ಪ್ರವೇಶ
“19 ವರ್ಷಗಳ ಹಿಂದೆ ನಾನು ಕ್ರಿಕೆಟ್ ಆಡತೊಡಗಿದಾಗ ಕ್ರೀಡೆಯ ಮೇಲೆ ಅಪಾರ ಒಲವು ಹೊಂದಿದ್ದ ಪುಟ್ಟ ಹುಡುಗಿ ಆಗಿದ್ದೆ. ಇಂದಿಗೂ ನನ್ನ ಕ್ರಿಕೆಟ್ ಪ್ರೀತಿ ಅದೇ ಮಟ್ಟದಲ್ಲಿದೆ. ನನ್ನ ಹೃದಯ ಆಟ ಮುಂದುವರಿಸುವಂತೆ ಕೇಳಿಕೊಂಡರೂ ದೇಹ ಸ್ಪಂದಿಸುತ್ತಿಲ್ಲ’ ಎಂದು 31 ವರ್ಷದ ವನಿತಾ ಹೇಳಿದರು. ದೇಶಿ ಕ್ರಿಕೆಟ್‌ನಲ್ಲಿ ಅವರು ಕರ್ನಾಟಕ ಮತ್ತು ಬಂಗಾಲವನ್ನು ಪ್ರತಿನಿಧಿಸಿದ್ದರು.