Advertisement

ಭಾರತದಿಂದ ಮತ್ತೊಂದು ಜಾಗತಿಕ ದಾಖಲೆ; ಒಂದೇ ದಿನದಲ್ಲಿ 20 ಲಕ್ಷ ಕೋವಿಡ್ 19 ಪರೀಕ್ಷೆ

04:55 PM May 19, 2021 | Team Udayavani |

ನವದೆಹಲಿ:ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಟ ಮುಂದುವರಿಯುತ್ತಿರುವ ನಡುವೆಯೇ ಭಾರತ ಒಂದೇ ದಿನಗದಲ್ಲಿ 20 ಲಕ್ಷ ಕೋವಿಡ್ 19 ಪರೀಕ್ಷೆ ನಡೆಸುವ ಮೂಲಕ ಜಾಗತಿಕವಾಗಿ ಮತ್ತೊಂದು ದಾಖಲೆಯ ಸಾಧನೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ(ಮೇ 19) ತಿಳಿಸಿದೆ.

Advertisement

ಕಳೆದ 24ಗಂಟೆಗಳಲ್ಲಿ 20ಲಕ್ಷಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಸಲಾಗಿದೆ,(ದೇಶದಲ್ಲಿ ಈವರೆಗೆ ನಡೆಸಿದ ಪರೀಕ್ಷೆಗಿಂತ ದಾಖಲೆಯ ಪ್ರಮಾಣ ಇದಾಗಿದೆ) ದಿನದ ಪಾಸಿಟಿವಿಟಿ ದರ 13.31ಕ್ಕೆ ಇಳಿಕೆಯಾಗಿರುವುದಾಗಿ ಆರೋಗ್ಯ ಸಚಿವಾಲಯ  ವಿವರಿಸಿದೆ.

ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 20.08 ಲಕ್ಷ ಪರೀಕ್ಷೆಗಳನ್ನು ನಡೆಸುವ ಮೂಲಕ ಜಾಗತಿಕ ದಾಖಲೆ ಬರೆದಿದೆ ಎಂದು ಸಚಿವಾಲಯ ಹೇಳಿದೆ. ಈವರೆಗೆ ದೇಶದಲ್ಲಿ 32 ಕೋಟಿಗೂ ಅಧಿಕ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕಳೆದ 24ಗಂಟೆಗಳಲ್ಲಿ 3,89, 851 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ಭಾರತದಲ್ಲಿ ಒಟ್ಟು ಕೋವಿಡ್ ನಿಂದ ಚೇತರಿಸಿಕೊಂಡವರ ಸಂಖ್ಯೆ 2,19,86,363ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.86.23ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next