Advertisement
ಇದೇ ವೇಳೆ, ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ 24 ಗಂಟೆಗಳಲ್ಲಿ 69,921 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಅವಧಿಯಲ್ಲಿ 819 ಸೋಂಕಿತರು ಅಸುನೀಗಿದ್ದಾರೆ. ಕೋವಿಡ್ ಮರಣ ಪ್ರಮಾಣ ಮತ್ತಷ್ಟು ಇಳಿಕೆಯಾಗಿದ್ದು, ಈಗ ಶೇ.1.77ಕ್ಕೆ ತಲುಪಿದೆ. ಆ.31 ರವರೆಗೆ 4.33 ಕೋಟಿಗೂ ಅಧಿಕ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದೆ ಎಂದೂ ಮಾಹಿತಿ ನೀಡಿದೆ.
ಕೋವಿಡ್ ಬಿಕ್ಕಟ್ಟು ನಿರ್ವಹಣೆಗೆ ಭಾರತಕ್ಕೆ 3,500 ಕೋಟಿ ರೂ. ಸಾಲ ನೀಡಲು ಜಪಾನ್ ಸಮ್ಮತಿ ಸೂಚಿಸಿದೆ. ಜಪಾನ್ ಅಂತಾ ರಾಷ್ಟ್ರೀಯ ಸಹಕಾರ ಸಂಸ್ಥೆಯು,(ಜೆಐಸಿಎ) ಕೋವಿಡ್ ಸಂಕಷ್ಟ ಪರಿಹಾರಕ್ಕಾಗಿ ಭಾರತಕ್ಕೆ ಆರ್ಥಿಕ ನೆರವು ನೀಡುವ ಸಲುವಾಗಲಿ ಒಪ್ಪಂದ ಮಾಡಿಕೊಂಡಿದೆ. ಈ ಹಣವನ್ನು ಪ್ರಧಾನ ಮಂತ್ರಿ ಅತ್ಮನಿರ್ಭರ್ ಸ್ವಸ್ಥ ಭಾರತ್ ಯೋಜನೆಯಡಿ (ಪಿಎಂ-ಎಎಸ್‌ಬಿವೈ) ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಿಗೆ ಬಳಸಲು ಉದ್ದೇಶಿ ಸಲಾಗಿದೆ. ಸಾಮಾಜಿಕ ಹಾಗೂ ಆರ್ಥಿಕ ಸುಸ್ಥಿರ ಹಾಗೂ ಅಭಿವೃದ್ಧಿ ಗಾಗಿ ಭಾರತಕ್ಕೆ ನೆರವು ನೀಡಲಾಗುತ್ತಿದೆ ಎಂದು ಜೆಐಸಿಎ ತಿಳಿಸಿದೆ.