Advertisement

ಭಾರತದಲ್ಲಿ ಶೀಘ್ರ ಓದುಗರಿಗಿಂತ ಹೆಚ್ಚು ಸಂಖ್ಯೆಯ ಲೇಖಕರು: ರಸ್ಕಿನ್‌ ಬಾಂಡ್‌

09:57 AM May 05, 2019 | Sathish malya |

ಕೋಲ್ಕತ : ಭಾರತವು ಶೀಘ್ರದಲ್ಲೇ ಓದುಗರಿಗಿಂತ ಹೆಚ್ಚಿನ ಸಂಖ್ಯೆಯ ಲೇಖಕರನ್ನು ಕಾಣುವ ವೈಚಿತ್ರ್ಯವನ್ನು ಎದುರಿಸಲಿದೆ ಎಂದು ವಿಶ್ವ ಖ್ಯಾತಿಯ ಲೇಖಕ ರಸ್ಕಿನ್‌ ಬಾಂಡ್‌ ಹೇಳಿದ್ದಾರೆ.

Advertisement

ಭಾರತದಲ್ಲಿ ಪ್ರಕಾಶನ ಉದ್ಯಮವು ಸಾಕಷ್ಟು ಅಭಿವೃದ್ಧಿ ಹೊಂದಿದ್ದು ಕಳೆದ ಕೆಲ ವರ್ಷಗಳಲ್ಲಿ ಅದು ಪ್ರೌಢಿಮೆಗೆ ಬಂದಿದೆ ಮತ್ತು ಯುವ ಲೇಖಕರಿಗೆ ಅದರಿಂದ ಲಾಭವಾಗುತ್ತಿದೆ ಎಂದು ರಸ್ಕಿನ್‌ ಬಾಂಡ್‌ ಹೇಳಿದರು.

85ರ ಹರೆಯದ ರಸ್ಕಿನ್‌ ಬಾಂಡ್‌ ಅವರು ಶಾಲಾ ವಿದ್ಯಾರ್ಥಿಗಳಿಗಾಗಿ ಅಭಿವೃದ್ಧಿ ಪಡಿಸಲಾಗಿರುವ ‘myELSA’ ಎಂಬ ಆಂಗ್ಲ ಭಾಷಾ ಆ್ಯಪ್‌ ಬಿಡುಗಡೆ ಸಂಬಂಧ ನಗರಕ್ಕೆ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next