Advertisement

ಮಸೂದ್‌ ಅಜರ್‌ ನಿಷೇಧ: ಭಾರತ ಯತ್ನ ಮುಂದುವರಿಯಲಿದೆ: ಕೇಂದ್ರ

06:47 AM Mar 16, 2019 | Team Udayavani |

ಹೊಸದಿಲ್ಲಿ : ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಸ್ಥಾಪಕ ಮಸೂದ್‌ ಅಜರ್‌ ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಠರಾವನ್ನು ಚೀನ ನಾಲ್ಕನೇ ಬಾರಿಗೆ ತಡೆದಿರುವ ಹೊರತಾಗಿಯೂ ಭಾರತ ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಜತೆಗೂಡಿ ಕೆಲಸ ಮಾಡುವ ಮೂಲಕ ತನ್ನ ಪ್ರಯತ್ನವನ್ನು ಅತ್ಯಂತ ಸಹನೆ ಮತ್ತು ತಾಳ್ಮೆಯಿಂದ ಮುಂದುವರಿಸಿ ಗುರಿ ಸಾಧಿಸಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. 

Advertisement

ಪಾಕಿಸ್ಥಾನ ಕಳೆದ ಕೆಲ ದಿನಗಳಲ್ಲಿ ತನ್ನಲ್ಲಿನ ಉಗ್ರರ ಸಮೂಹಗಳ ವಿರುದ್ಧ ತೆಗೆದುಕೊಂಡಿರುವ ಕ್ರಮವು ಕೇವಲ ತೋರಿಕೆಯದ್ದಾಗಿದೆ ಎಂದು ಮೂಲಗಳು ಹೇಳಿವೆ. 

ಭಯೋತ್ಪಾದನೆಯು ಚೀನಕ್ಕೂ ಒಂದು ಪ್ರಮುಖ ವಿಷಯ ಎಂದು ನಾವು ನಂಬುತ್ತೇವೆ; ಪಾಕಿಸ್ಥಾನದಲ್ಲಿ ಅನೇಕ ಉಗ್ರ ಸಮೂಹಗಳಿರುವುದು ಚೀನಕ್ಕೂ ಗೊತ್ತಿದೆ ಎಂದು ಭಾರತ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next