Advertisement
ಜಿಲ್ಲಾಡಳಿತ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸೊಸೈಟಿ ಸಹಯೋಗದಲ್ಲಿ ಸೋಮವಾರ ನಗರದ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ-ಶಿಕ್ಷಕ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಮಧ್ಯಾಹ್ನ ಇಸ್ರೋ ಹಿರಿಯ ವಿಜ್ಞಾನಿ ಪಿ.ಜೆ.ಭಟ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ (ಕರಾವಿಪ) ರಾಜ್ಯ ಕಾರ್ಯಕಾರಿ ಸಮಿತಿ ಸಮಿತಿ ಸದಸ್ಯ ಡಾ| ಕುಂಟೆಪ್ಪ ಗೌರಿಪುರ ಪ್ರಾಸ್ತಾವಿಕ ಮಾತನಾಡಿದರು.
ಪರಿಷತ್ ಜಿಲ್ಲಾಧ್ಯಕ್ಷ ಡಾ| ವೆಂಕಟೇಶ ದೇವರು ಅಧ್ಯಕ್ಷತೆ ವಹಿಸಿದ್ದರು. ಎಡಿಸಿ ಗೋವಿಂದ ರೆಡ್ಡಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಟಿ.ಕಲ್ಲಯ್ಯ, ಕರಾವಿಪ ರಾಜ್ಯ ಕಾರ್ಯದರ್ಶಿ ಗಿರೀಶ ಬಿ.ಕಡ್ಲೇವಾಡ, ಸಮಿತಿ ಸದಸ್ಯ ಜಗನ್ನಾಥ ಹಲಮಡಗಿ, ಡೀನ್ ಪ್ರೊ| ಚಂದರಗಿ, ಡಾ| ಪ್ರಮೋದ್ ಕಟ್ಟಿ, ಖಜಾಂಚಿ ನಿಜಾನಂದರೆಡ್ಡಿ, ಸದಸ್ಯರಾದ ಡಾ| ವೀರೇಶ ಶೆರೆಗಾರ, ವೆಂಕಟೇಶ ಬೇವಿನಬೆಂಚಿ ಇದ್ದರು. ಕರಾವಿಪ ಜಿಲ್ಲಾ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ ರಾಯಚೂರುಕರ್ ಸ್ವಾಗತಿಸಿದರು. ಕಾರ್ಯದರ್ಶಿ ಬಸಪ್ಪ ಗದ್ದಿ ನಿರೂಪಿಸಿದರು. ಜಿಲ್ಲೆಯ ಆಯ್ದ ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಶಿಕ್ಷಕರು, ಪಪೂ ಕಾಲೇಜುಗಳ ಉಪನ್ಯಾಸಕರು ಪಾಲ್ಗೊಂಡಿದ್ದರು.
ಗಮನ ಸೆಳೆದ ಸಂವಾದ: ನಂತರ ಇಬ್ಬರೂ ವಿಜ್ಞಾನಿಗಳು ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿದರು. ಈ ವೇಳೆ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಸಾವಧಾನದಿಂದಲೇ ಉತ್ತರಿಸಿದರು. ಬಾಹ್ಯಾಕಾಶದಲ್ಲಿ ಈವರೆಗೆ ಕೈಗೊಂಡ ಕೆಲಸ, ಸಾಧನೆ, ಭವಿಷ್ಯದ ಉದ್ದೇಶ, ಸವಾಲು ಹೀಗೆ ಹತ್ತು ಹಲವು ವಿಚಾರಗಳಿಗೆ ಉತ್ತರ ನೀಡುವ ಮೂಲಕ ಮಕ್ಕಳ ಕುತೂಹಲ ತಣಿಸಿದರು.