Advertisement

ಏಕದಿನ ತಂಡ ರ್‍ಯಾಂಕಿಂಗ್‌: 3ನೇ ಸ್ಥಾನ ಗಟ್ಟಿಗೊಳಿಸಿದ ಭಾರತ

11:11 PM Jul 18, 2022 | Team Udayavani |

ದುಬಾೖ: ಇಂಗ್ಲೆಂಡ್‌ ವಿರುದ್ಧದ ಮ್ಯಾಂಚೆಸ್ಟರ್‌ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದು ಸರಣಿ ವಶ ಪಡಿಸಿಕೊಂಡ ಭಾರತವೀಗ ಏಕದಿನ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನವನ್ನು ಗಟ್ಟಿ ಗೊಳಿಸಿದೆ. ಸರಣಿ ಸೋತರೂ ಇಂಗ್ಲೆಂಡ್‌ 2ನೇ ಸ್ಥಾನದಲ್ಲೇ ಉಳಿ ದಿದೆ. ನ್ಯೂಜಿಲ್ಯಾಂಡ್‌ ಅಗ್ರಸ್ಥಾನ ಕಾಯ್ದುಕೊಂಡಿದೆ.

Advertisement

ಭಾರತವೀಗ 109 ರೇಟಿಂಗ್‌ ಅಂಕ ಗಳನ್ನು ಹೊಂದಿದೆ. ಪಾಕಿಸ್ಥಾನದ ಬಳಿ ಇರುವ ಅಂಕ 106. ನ್ಯೂಜಿಲ್ಯಾಂಡ್‌ 128, ಇಂಗ್ಲೆಂಡ್‌ 122 ಅಂಕ ಹೊಂದಿದೆ. ಇಂಗ್ಲೆಂಡ್‌ ಎದುರಿನ ಸರಣಿಗೂ ಮುನ್ನ ಭಾರತ 4ನೇ ಸ್ಥಾನದಲ್ಲಿತ್ತು (105 ಅಂಕ). ಓವಲ್‌ನಲ್ಲಿ 10 ವಿಕೆಟ್‌ಗಳಿಂದ ಗೆದ್ದೊಡನೆಯೇ ಪಾಕಿಸ್ಥಾನ ವನ್ನು ಹಿಂದಿಕ್ಕಿತ್ತು. ಆಗ ಅಂಕ 108ಕ್ಕೆ ಏರಿತ್ತು. ಲಾರ್ಡ್ಸ್‌ನಲ್ಲಿ ಸೋತರೂ ಮ್ಯಾಂಚೆಸ್ಟರ್‌ನಲ್ಲಿ ಗೆದ್ದು ತೃತೀಯ ಸ್ಥಾನವನ್ನು ಇನ್ನಷ್ಟು ಭದ್ರ ಪಡಿಸಿ ಕೊಂಡಿತು.

ಕಳೆದ ತಿಂಗಳು ವೆಸ್ಟ್‌ ಇಂಡೀಸ್‌ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧಿಸಿದ್ದ ಪಾಕಿಸ್ಥಾನ ಭಾರತವನ್ನು ಕೆಳಕ್ಕೆ ತಳ್ಳಿ 3ನೇ ಸ್ಥಾನಕ್ಕೆ ಏರಿತ್ತು. ಈಗ ಮತ್ತೆ ಇತ್ತಂಡಗಳ ಸ್ಥಾನಪಲ್ಲಟವಾಗಿದೆ.

ಭಾರತವಿನ್ನು ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿ ಆಡಲಿದ್ದು, ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅಂಕಗಳಲ್ಲಿ ಒಂದಿಷ್ಟು ಪ್ರಗತಿ ಕಾಣಬಹುದು. ಆದರೆ ದ್ವಿತೀಯ ಸ್ಥಾನಕ್ಕೆ ಏರಲು ಸಾಧ್ಯವಾಗದು. ಪಾಕಿಸ್ಥಾನ ಮುಂದಿನ ತಿಂಗಳು ನೆದರ್ಲೆಂಡ್ಸ್‌ ವಿರುದ್ಧ ಸರಣಿ ಆಡಲಿದೆ. ಇದನ್ನು ಗೆದ್ದರೆ ಪಾಕ್‌ಗೆ ತುಸು ಲಾಭವಾಗಲಿದೆ.

ಇಂಗ್ಲೆಂಡ್‌ನ‌ಲ್ಲಿ ಭಾರತದ ಏಕದಿನ ಸರಣಿ ಸಾಧನೆ
ವರ್ಷ       ಫ‌ಲಿತಾಂಶ
1974        2-0 ಸೋಲು
1982        2-0 ಸೋಲು
1986        1-1 ಸಮಬಲ
1990         2-0 ಗೆಲುವು
1996         2-0 ಸೋಲು
2004        2-1 ಸೋಲು
2007         4-3 ಸೋಲು
2011          3-0 ಸೋಲು
2014         3-1 ಗೆಲುವು
2018         2-1 ಸೋಲು
2022         2-1 ಗೆಲುವು

Advertisement
Advertisement

Udayavani is now on Telegram. Click here to join our channel and stay updated with the latest news.

Next