Advertisement

ಅಗ್ನಿ 1 ಅಣ್ವಸ್ತ್ರ ಕ್ಷಿಪಣಿಯ ರಾತ್ರಿ ಉಡಾವಣೆ ಪ್ರಯೋಗ ಯಶಸ್ವಿ

12:31 PM Oct 31, 2018 | udayavani editorial |

ಹೊಸದಿಲ್ಲಿ : ಭಾರತ ನಿನ್ನೆ ಮಂಗಳವಾರ ರಾತ್ರಿ 700 ಕಿ.ಮೀ. ದಾಳಿ ವ್ಯಾಪ್ತಿಯ ಅಗ್ನಿ 1 ಬ್ಯಾಲಿಸ್ಟಿಕ್‌ ಮಿಸೈಲ್‌ ನ ರಾತ್ರಿ ವೇಳೆಯ ಉಡಾವಣೆಯನ್ನು ಒಡಿವಾ ಕರಾವಳಿಯ ದೂರ ಸಮುದ್ರದಲ್ಲಿ  ಯಶಸ್ವಿಯಾಗಿ ಕೈಗೊಂಡಿತೆಂದು ರಕ್ಷಣಾ ಮೂಲಗಳು ತಿಳಿಸಿವೆ.

Advertisement

ಭಾರತೀಯ ಸೇನೆಯ ಸಮರ ಸನ್ನದ್ಧತೆಯನ್ನು ಸದೃಢಗೊಳಿಸುವ ದಿಶೆಯಲ್ಲಿ ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ ಅಗ್ನಿ 1 ಅಣ್ವಸ್ತ್ರ ಸಜ್ಜಿತ ಕ್ಷಿಪಣಿಯ ರಾತ್ರಿ ವೇಳೆಯ ಪರೀಕ್ಷಾ ಉಡಾವಣೆಯನ್ನು ನಿನ್ನೆ ಮಂಗಳವಾರ ರಾತ್ರಿ ಡಾ. ಅಬ್ದುಲ್‌ ಕಲಾಮ್‌ ದ್ವೀಪದಿಂದ ದೇಶದ ಸ್ಟ್ರಾಟೆಜಿಕ್‌ ಫೋರ್ಸಸ್‌ ಕಮಾಂಡ್‌ (ಎಸ್‌ಎಫ್ಸಿ) ಯಶಸ್ವಿಯಾಗಿ ಕೈಗೊಂಡಿತೆಂದು ಮೂಲಗಳು ತಿಳಿಸಿವೆ.  

Advertisement

Udayavani is now on Telegram. Click here to join our channel and stay updated with the latest news.

Next