Advertisement

40 ಬಲಿ ಪಡೆದ ಕಾಬೂಲ್‌ ಆತ್ಮಾಹುತಿ ದಾಳಿ; ಭಾರತದ ಖಂಡನೆ

12:10 PM Dec 29, 2017 | Team Udayavani |

ಹೊಸದಿಲ್ಲಿ : 40 ಅಮಾಯಕರನ್ನು ನಿರ್ದಯವಾಗಿ ಬಲಿ ಪಡೆದ ಕಾಬೂಲ್‌ನ ಶಿಯಾ ಸಾಂಸ್ಕೃತಿಕ ಕೇಂದ್ರದ ಮೇಲಿನ ನಿನ್ನೆ ಗುರುವಾರದ ಹೇಡಿತನದ ಉಗ್ರ ದಾಳಿಯನ್ನು ಭಾರತ ಇಂದು ಬಲವಾಗಿ ಖಂಡಿಸಿದೆ.

Advertisement

ಭಯೋತ್ಪಾದನೆ ವಿರುದ್ಧ ಹೋರಾಡಲು ಅಪಾ^ನಿಸ್ಥಾನಕ್ಕೆ ಸರ್ವ ಬಗೆಯ ನೆರವನ್ನು ತಾನು ನೀಡುವುದಾಗಿ ಭಾರತ ಪುನರುಚ್ಚರಿಸಿದೆ. ಕಾಬೂಲ್‌ ಶಿಯಾ ಕೇಂದ್ರದ ಮೇಲಿನ ಆತ್ಮಾಹುತಿ ದಾಳಿ ತನ್ನದೇ ಕೃತ್ಯವೆಂದು ಐಸಿಸ್‌ ಉಗ್ರ ಸಂಘಟನೆ ಈಗಾಗಲೇ ಹೇಳಿಕೊಂಡಿದೆ. 

ಭಾರತದ ವಿದೇಶ ವ್ಯವಹಾರಗಳ ಸಚಿವಾಲಯ ಕಾಬೂಲ್‌ ದಾಳಿಯನ್ನು ಖಂಡಿಸುವ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಅಫ್ಘಾನಿಸ್ಥಾನದೊಂದಿಗಿನ ತನ್ನ ಬಾಂಧವ್ಯ ಮತ್ತು ಒಗ್ಗಟ್ಟನ್ನು ಪುನರುಚ್ಚರಿಸಿದ್ದು ಈ ಕಷ್ಟಕಾಲದಲ್ಲಿ ನಾವು ಅಫ್ಘಾನ್‌ ಜನತೆಯೊಂದಿಗೆ ಇದ್ದೇವೆ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next