Advertisement
ಸೇನೆಗೆ ಮೀಸಲಾಗಿರುವ ತುರ್ತು ಆರ್ಥಿಕ ನಿಧಿ ಅಡಿಯಲ್ಲಿ ಹೆಚ್ಚುವರಿ ಶಸ್ತ್ರಾಸ್ತ್ರಗಳ ಖರೀದಿಗೆ 50 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಸ್ಥಳೀಯ ಮತ್ತು ವಿದೇಶಿ ಸಂಸ್ಥೆಗಳಿಂದ ಶಸ್ತ್ರಾಸ್ತ್ರ, ಯುದ್ದೋಪಕರಣಗಳ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಸೇನೆ ಕೆಲವು ತಿಂಗಳುಗಳ ಹಿಂದಷ್ಟೇ 10 ದಿನಗಳ ಯುದ್ಧಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ, ಮದ್ದುಗುಂಡು, ಯುದೊœàಪ ಕರಣ ಖರೀದಿಗೆ ನಿರ್ಧರಿಸಿತ್ತು. ಈಗ 15 ದಿನಗಳ ಯುದ್ಧ ದೃಷ್ಟಿಯಲ್ಲಿ ಇರಿಸಿಕೊಂಡು ಯುದೊœàಪ ಕರಣ ಗಳನ್ನು ಸಂಗ್ರಹಿಸುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.
Related Articles
ವರ್ಷಗಳ ಹಿಂದೆ 40 ದಿನಗಳ ಯುದ್ಧ ದೃಷ್ಟಿಯಲ್ಲಿಟ್ಟು ಕೊಂಡು ಅಗತ್ಯವಿರುವ ಯುದ್ದೋಪಕರಣ ಖರೀದಿಗೆ ಸೇನೆ ನಿರ್ಧರಿಸಿತ್ತು. ಆದರೆ ಬದಲಾದ ತಂತ್ರಜ್ಞಾನ, ಶಸ್ತ್ರಾಸ್ತ್ರ- ಮದ್ದುಗುಂಡುಗಳ ಸಂಗ್ರಾಹಕಗಳ ಸಮಸ್ಯೆ ಯಿಂದಾಗಿ ಇದನ್ನು 10 ದಿನಗಳಿಗೆ ಇಳಿಸಲಾಗಿತ್ತು. “ಉರಿ’ ದಾಳಿ ಬಳಿಕ ಸೇನೆ ಯುದ್ದೋಪಕರಣ ಸಂಗ್ರಹ ಅಗತ್ಯ ಮನಗಂಡಿದ್ದು, ಯೋಜನೆಗೆ ವೇಗ ನೀಡಿದೆ.
Advertisement
ಏನೇನು ದಾಸ್ತಾನು?ಯುದ್ದೋಪಕರಣ ಬಿಡಿಭಾಗಗಳು, ಶಸ್ತ್ರಾಸ್ತ್ರ, ಕ್ಷಿಪಣಿ, ಟ್ಯಾಂಕರ್‌ಗೆ ಅಗತ್ಯವುಳ್ಳ ಮದ್ದುಗುಂಡು, ಫಿರಂಗಿಗಳನ್ನು ಖರೀದಿಸಲಾಗುತ್ತಿದೆ. ಸಾಲ ತೀರಿಸಲು ಚೀನ ನೆರವು
ಬೀಜಿಂಗ್: ಪಾಕಿಸ್ಥಾನವು ಸೌದಿ ಅರೇಬಿಯಾದಿಂದ ಪಡೆದಿದ್ದ 2 ಶತಕೋಟಿ ಡಾಲರ್ ಸಾಲದ ಪೈಕಿ 1.5 ಶತಕೋಟಿ ಡಾಲರ್ ನೆರವು ನೀಡಲು ಚೀನ ಒಪ್ಪಿಕೊಂಡಿದೆ.