Advertisement

ಭಾರತ-ಚೀನಾ “ಯೋಗ’

07:05 AM Oct 11, 2017 | Team Udayavani |

ನವದೆಹಲಿ: ಚೀನಾ ಸರ್ಕಾರದ ಮಹತ್ವಾಕಾಂಕ್ಷೆಯ “ಭಾರತ-ಚೀನಾ ಯೋಗ ಕಾಲೇಜು’ (ಐಸಿವೈಸಿ) ಮಂಗಳವಾರದಿಂದ ಆರಂಭವಾಗಿದೆ. ವಿಶೇಷವೆಂದರೆ, ಇದಕ್ಕೆ ಬೆಂಗಳೂರಿನ ನಂಟಿದೆ. ಅದು ಹೇಗೆಂದು ಯೋಚಿಸುತ್ತಿದ್ದೀರಾ?

Advertisement

ಈ ಇಂಡೋ- ಚೈನಾ ಯೋಗ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮಾಡುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನವು ಪ್ರಮಾಣ ಪತ್ರ ಪ್ರದಾನ ಮಾಡುತ್ತದೆ. ಈಗಾಗಲೇ ಕೋರ್ಸ್‌ಗಾಗಿ ಅರ್ಜಿಯನ್ನು ಕರೆಯಲಾಗಿದೆ. ಈ ಸ್ನಾತಕೋತ್ತರ ಪದವಿ ಮೂರು ವರ್ಷಗಳ ಅವಧಿಯದ್ದಾಗಿದ್ದು, ಇದರ ಮೊದಲೆರಡು ವರ್ಷಗಳ ತರಗತಿಗಳು ದಕ್ಷಿಣ ಚೀನಾದ ಯುನ್ನಾನ್‌ ಪ್ರಾಂತ್ಯದ ರಾಜಧಾನಿಯಾದ ಕನಿ¾ಂಗ್‌ ನಗರದಲ್ಲಿ ನಡೆಯಲಿದೆ. ಕೋರ್ಸ್‌ನ ಅಂತಿಮ ವರ್ಷದ ತರಗತಿಗಳು ಭಾರತದಲ್ಲಿ ನಡೆಯಲಿವೆ ಎಂದು ಕಾಲೇಜಿನ ಉಪ ಪ್ರಾಂಶುಪಾಲ ಲು ಫಾಂಗ್‌ ತಿಳಿಸಿರುವುದಾಗಿ ಚೀನಾದ ಸರ್ಕಾರಿ ಮಾಧ್ಯಮವಾದ ಕ್ಸಿನ್‌ ಹುವಾ ವರದಿ ಮಾಡಿದೆ.  ಈ ಕೋರ್ಸ್‌ ಮಾಡುವ ವಿದ್ಯಾರ್ಥಿಗಳಿಗೆ ಚೀನಾದ ಯುನ್ನಾನ್‌ ಮಿಂಝು ವಿಶ್ವವಿದ್ಯಾಲಯ, ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಸಂಸ್ಥೆಯಿಂದ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಗುತ್ತದೆ. 

ಕೋರ್ಸ್‌ ನಲ್ಲಿ ಆಸನಗಳು, ಪ್ರಾಣಾ ಯಾಮ, ಯೋಗ ಚಿಕಿತ್ಸೆ ಹಾಗೂ ಶರೀರಶಾಸ್ತ್ರ ವಿಷಯಗಳನ್ನು ಅಳವಡಿಸಲಾಗಿದೆ. ಭಾಷೆಯ ನಿರ್ಬಂಧನೆ ಗಳನ್ನು ಹೋಗಲಾಡಿಸಲು ಈ ಕೋರ್ಸ್‌ ನಲ್ಲಿ ಹಿಂದಿ ಹಾಗೂ ಸಂಸ್ಕೃತ ಭಾಷೆಗಳನ್ನು ಕಲಿಸಲು ಉದ್ದೇಶಿಸಲಾಗಿದೆ. ಚೀನೀ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃ ತಿಗೆ ಸಂಬಂಧಪಟ್ಟ ವಿಶೇಷ ತರಗತಿಗಳನ್ನೂ ನಡೆಸಲಾಗುವುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next