Advertisement

ಯುದ್ಧ! ಸಿಕ್ಕಿಂ ಗಡಿಯಲ್ಲಿ ಯಾವುದೇ ಕ್ಷಣ ಶುರು?

06:25 AM Aug 11, 2017 | Team Udayavani |

ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಈಗ ಯುದ್ಧ ಭೀತಿ ಅಕ್ಷರಶಃ ಮುಗಿಲೇರಿದೆ. ಭಾರತ-ಚೀನಾ-ಭೂತಾನ್‌ನ ಸಂಗಮ ಪ್ರದೇಶ ಡೋಕ್ಲಾಂ ಸುತ್ತಮುತ್ತಲಿನ ನಿವಾಸಿಗಳ ಸ್ಥಳಾಂತರಕ್ಕೆ ಭಾರತೀಯ ಸೇನಾಪಡೆ ಆದೇಶಿಸಿದ್ದು, ಯಾವುದೇ ಕ್ಷಣದಲ್ಲಿ ಯುದ್ಧ ಆರಂಭವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕಳೆದ 24 ಗಂಟೆಗಳಲ್ಲಿನ ಎರಡು ವಿದ್ಯಮಾನಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ಇತ್ತ ಭಾರತೀಯ ಸೇನಾ ಪಡೆ ಡೋಕ್ಲಾಂಗೆ ಹತ್ತಿರದ ನಥಾಂಗ್‌ ಹಳ್ಳಿಯ ನಿವಾಸಿಗಳನ್ನು ಸ್ಥಳಾಂತರಿಸಿ, ಅಲ್ಲಿ ಸೇನಾ ಯೋಧರನ್ನು ನಿಯೋಜಿಸಿದ್ದರೆ, ಅತ್ತ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್‌ಎ), ಪ್ಲಟೆಯು ಸುತ್ತಮುತ್ತ 800 ಯೋಧರನ್ನು ನಿಯೋಜನೆ ಮಾಡಿಕೊಂಡಿದೆ.

ಮೂಲಗಳ ಪ್ರಕಾರ, ಡೋಕ್ಲಾಂನಿಂದ ಅಂದಾಜು 35 ಕಿ.ಮೀ. ದೂರದ ನಥಾಂಗ್‌ನ ನೂರಾರು ಕುಟುಂಬಗಳಿಗೆ ಕೂಡಲೇ ಸುರಕ್ಷಿತ ಪ್ರದೇಶಗಳಿಗೆ ತೆರಳವುವಂತೆ ಭಾರತೀಯ ಸೇನೆ ಆದೇಶಿಸಿದೆ. ಆದರೆ, ಯುದ್ಧದ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ಸುಕಾ¾ದಿಂದ ಸಾವಿರಾರು ಯೋಧರ ನಿಯೋಜನೆಗಾಗಿ ಈ ಆದೇಶ ನೀಡಿಧ್ದೋ ಅಥವಾ ಹಠಾತ್‌ ಗುಂಡಿನ ಚಕಮಕಿ ನಡೆದಲ್ಲಿ ಸಾವು-ನೋವುಗಳು ಆಗದಂತೆ ನೋಡಿಕೊಳ್ಳಲು ಈ ಕ್ರಮವೋ ಎನ್ನುವುದರ ಬಗ್ಗೆ ಸೇನೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.

ಭೂತಾನ್‌ ತಿರಸ್ಕಾರ: ಇವೆಲ್ಲದರ ನಡುವೆ ಡೋಕ್ಲಾಂ ನಮ್ಮದು ಎಂದು ಹೇಳಿಕೊಳ್ಳುತ್ತಿರುವ ಚೀನಾ ಉದ್ಧಟತನದ ಹೇಳಿಕೆಯನ್ನು ಭೂತಾನ್‌ನ ತಿರಸ್ಕರಿಸಿದೆ. “ಚೀನಾದ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದಕ್ಕೆ ಯಾವುದೇ ದಾಖಲೆಗಳೂ ಇಲ್ಲ. ಡೋಕ್ಲಾಂ ವಾಸ್ತವದಲ್ಲಿ ನಮಗೇ ಸೇರಿದ್ದು’ ಎಂದಿದೆ.

ತಾಲೀಮು, ಈ ವರ್ಷ ಸ್ವಲ್ಪ ಬೇಗ!
ನ್ಯೂಸ್‌18 ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ನಥಾಂಗ್‌ ಹಳ್ಳಿ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಚುರುಕುಗೊಂಡಿದೆ. ನೂರಾರು ಮನೆಗಳನ್ನು ಹೊಂದಿರುವ ಚಿಕ್ಕ ಹಳ್ಳಿಯಿಂದ ಈಗಾಗಲೇ ನಿವಾಸಿಗಳ ಸ್ಥಳಾಂತರ ಪ್ರಕ್ರಿಯೆ ಶುರುವಾಗಿದೆ. ಕೆಲ ಹಿರಿಯ ಅಧಿಕಾರಿಗಳು, ಪ್ರತಿ ಸೆಪ್ಟೆಂಬರ್‌ನಲ್ಲಿ ನಡೆಸುವ ವಾರ್ಷಿಕ ತಾಲೀಮು ಪ್ರಕ್ರಿಯೆ ಇದಾಗಿದ್ದು, ಈ ಭಾರಿ ಸ್ವಲ್ಪ ಮುಂಚಿತವಾಗಿಯೇ ಶುರುವಾಗಿದೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಇವೆಲ್ಲದರ ಹೊರತಾಗಿ ಕೆಲ ಮೂಲಗಳು, ಇದು ನೈಜ ತಾಲೀಮು ಪ್ರಕ್ರಿಯೆ ಅಷ್ಟೇ ಎನ್ನುತ್ತಿವೆ. ಆದರೆ ಸೇನಾ ಪಾಳಯದಿಂದ “ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’ ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಭಾರತ ಈಗಾಗಲೇ 350 ಯೋಧರನ್ನು ಸಿಕ್ಕಿಂ ಗಡಿಯಲ್ಲಿ ನಿಯೋಜನೆ ಮಾಡಿದೆ.

Advertisement

800 ಯೋಧರ ನಿಯೋಜನೆ
ಭಾರತೀಯ ಯೋಧರನ್ನು ಕ್ಷಣ ಕ್ಷಣಕ್ಕೂ ಕೆಣಕುತ್ತಿರುವ ಚೀನಾ ಈಗ ಮತ್ತೆ ಡೋಕ್ಲಾಂ ಪ್ರದೇಶದ ಪ್ಲಟೆಯುನಲ್ಲಿ 80 ಟೆಂಟ್‌ಗಳನ್ನು ಹಾಕಿದ್ದು, 800 ಯೋಧರನ್ನು ನಿಯೋಜಿಸಿ ಗಡಿ ಭದ್ರತಾ ದಳದ ಬಲ ಹೆಚ್ಚಿಸಿದೆ. ಈಗಾಗಲೇ 300 ಯೋಧರನ್ನು ನಿಯೋಜನೆ ಮಾಡಿತ್ತು. ಆದರೆ ಈಗ ಇನ್ನಷ್ಟು ಯೋಧರನ್ನು ನಿಯೋಜನೆ ಮಾಡಿಕೊಂಡಿರುವ ಬಗ್ಗೆ ಪಿಎಲ್‌ಎ ಖಚಿತ ಪಡಿಸಿಲ್ಲ.

ಡೋಕ್ಲಾಂ, ಪ್ಲಟೆಯುನಲ್ಲಿ ಎಂಥಾ ಪರಿಸ್ಥಿತಿ ಇದೆ ಎನ್ನುವುದನ್ನು ತಿಳಿದುಕೊಳ್ಳುವುದೇ ಕಷ್ಟವಾಗುತ್ತಿದೆ. ಆದರೆ ಚೀನಾ ಸೇನೆ ಕೆಣಕುವ ಕೃತ್ಯದಲ್ಲಿ ತೊಡಗಿರುವಂತೆ ಕಾಣಿಸುತ್ತಿದೆ.
– ರಾಜಾ ಕೃಷ್ಣಮೂರ್ತಿ, ಇಲಿನಾಯಿಸ್‌ (ಅಮೆರಿಕ) ಕಾಂಗ್ರೆಸ್‌ ಸದಸ್ಯ

ಭಾರತ ಮತ್ತು ಚೀನಾ ಸಿಕ್ಕಿಂ ಗಡಿ ವಿಚಾರವಾಗಿ ಹೊಸ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳುವುದೇ ಸೂಕ್ತ. 1890ರಲ್ಲಾದ ಗ್ರೇಟ್‌ ಬ್ರಿಟನ್‌-ಚೀನಾ ನಡುವಿನ ಒಪ್ಪಂದಕ್ಕೆ ಜೋತು ಬೀಳದೇ, ಬದಲಾದ ಪರಿಸ್ಥಿತಿ ಅರಿಯಬೇಕಿದೆ.
– ಜೋ ಕ್ಷಿಯೋಜೋಯು, ಚೀನಾದ ಹಿರಿಯ ಕರ್ನಲ್‌

ಯಾವುದೇ ಕಾರಣಕ್ಕೂ ಸಿಕ್ಕಿಂ ಗಡಿ ವಿಚಾರದಲ್ಲಿ ರಾಜಿ ಸಾಧ್ಯವೇ ಇಲ್ಲ. ಭಾರತದೊಂದಿಗೆ ಹೊಸ ಒಪ್ಪಂದ ಆಗಲೇಬೇಕು. ಭಾರತ ಕೂಡಲೇ ಡೋಕ್ಲಾಂನಲ್ಲಿ ನಿಯೋಜಿಸಿದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು.
– ವಿಶ್ಲೇಷಕರು, ಪೀಪಲ್ಸ್‌ ಲಿಬರೇಷನ್‌ ಆರ್ಮಿ

ಭಾರತದ್ದು ಶೀತಲ ಸಮರದ ಮನಸ್ಥಿತಿ. ಚೀನಾದೊಂದಿಗಿನ ಸಂಬಂಧ ವೃದ್ಧಿಸಿಕೊಳ್ಳುವಲ್ಲಿ ಭಾರತೀಯ ಅಧಿಕಾರಿಗಳು ಪ್ರಯತ್ನಿಸಬಹುದಿತ್ತು. ಚೀನಾ ದಕ್ಷಿಣ ಏಷ್ಯಾದ ಪ್ರಬಲ ಶಕ್ತಿಯಾಗಿ ಬೆಳೆಯುತ್ತದೆನ್ನುವ ಕಾರಣಕ್ಕಾಗಿಯೇ ಭಾರತ ಅಡ್ಡಿಪಡಿಸುತ್ತಿದೆ.
– ಜೋಯು ಗಾಂಗ್‌, ಭಾರತದ ಮಾಜಿ ರಾಯಭಾರಿ

ಗಡಿ ಪ್ರದೇಶದಲ್ಲಿ ಚೀನಾ-ಭಾರತ ನಡುವೆ ಯುದ್ಧ ಭೀತಿ ಇಲ್ಲ. ಶಾಂತಿ ನೆಲೆಸಿದೆ. ಉದ್ವಿಗ್ನ ಸ್ಥಿತಿ ಇದ್ದರೆ ತಾನೆ ಯುದ್ಧ ನಡೆಯಲು ಸಾಧ್ಯ. ಅಷ್ಟಕ್ಕೂ ಯುದ್ಧ ನಡೆಯಬಹುದಾದ ಸಾಧ್ಯತೆ ಕೂಡ ಇಲ್ಲ.
– ಪ್ರೇಮ್‌ ಖಂಡು, ಅರುಣಾಚಲ ಮುಖ್ಯಮಂತ್ರಿ

ಪತ್ರಿಕೆ ಏನೆಂದು ಬರೆದಿತ್ತು?
ಗಡಿ ವಿವಾದ ಆರಂಭ ಆದಾಗಿನಿಂದ ಒಂದಲ್ಲಾ ಒಂದು ಕೊಂಕು ಪ್ರಕಟಿಸುತ್ತಲೇ ಬಂದ ಸರ್ಕಾರಿ ಸ್ವಾಮ್ಯದ ಪತ್ರಿಕೆ “ಚೀನಾ ಡೈಲಿ’ ಮೊನ್ನೆ ಮೊನ್ನೆಯಷ್ಟೇ ಯುದ್ಧಕ್ಕೆ ಸನ್ನದ್ಧರಾಗಿ ಎನ್ನುವ ಧಾಟಿಯಲ್ಲೇ “ಚೀನಾ-ಭಾರತದ ನಡುವಿನ ಯುದ್ಧಕ್ಕೆ ಕ್ಷಣಗಣನೆ’ ಶೀರ್ಷಿಕೆಯಲ್ಲಿ ಸಂಪಾದಕೀಯ ಪ್ರಕಟಿಸಿತ್ತು. ಇದಕ್ಕೆ ಭಾರತದ ರಕ್ಷಣಾ ಸಚಿವ ಅರುಣ್‌ ಜೇಟಿÉ ಅವರು ಪ್ರತಿಕ್ರಿಯಿಸಿ “ಭಾರತವೂ ಯುದ್ಧಕ್ಕೆ ಸಿದ್ಧ’ ಎಂದು ತುಸು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸೇನಾ ನಿಯೋಜನೆ ಪ್ರಕ್ರಿಯೆಯೂ ಶುರುವಾಗಿದ್ದು ಈ ಎಲ್ಲಾ ಬೆಳವಣಿಗೆಗಳಿಗೆ ಪೂರಕವಾಗಿದೆ. ಇದೇ ರೀತಿ ಚೀನಾದ ಸುದ್ದಿ ಸಂಸ್ಥೆ ಕ್ಷಿಹುನಾ ಮತ್ತು ಗ್ಲೋಬಲ್‌ ಟೈಮ್ಸ್‌ ಕೂಡ ಲೇಖಕ ಪ್ರಕಟಿಸಿದ್ದವು.

ಗಡಿ ವಿವಾದಕ್ಕೆ ಮೂಲ ಕಾರಣ
ಕಿಡಿ ಹೊತ್ತುಕೊಂಡಿದ್ದು ಜೂನ್‌ 16ರಂದು. ಹೌದು, ಡೋಕ್ಲಾಂ ಪ್ರದೇಶದಲ್ಲಿ ಚೀನಾ ಗಡಿ ಕಾನೂನು ಉಲ್ಲಂ ಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಅಲ್ಲದೆ, ಭಾರತೀಯ ಯೋಧರ ಜತೆ ತಳ್ಳಾಟ ನಡೆಸಿ, ಒಳ ಪ್ರವೇಶಿಸಲು ಯತ್ನಿಸಿತ್ತು. ಈ ಘಟನೆ ಬಳಿಕ ಭಾರತ ಘಟನೆ ಖಂಡಿಸಿ, ಚೀನಾದ ಯುದೊœàನ್ಮಾದಕ್ಕೆ ಪ್ರತಿಯಾಗಿ ಗಡಿಯಲ್ಲಿ ಸೇನೆ ನಿಯೋಜನೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next