Advertisement
ಪೀಪಲ್ಸ್ ಲಿಬರೇಷನ್ ಆರ್ಮಿಯ ಅಧಿಕಾರಿಗಳು ಪೂರ್ವಗ್ರಹ ಪೀಡಿತ ಮನಸ್ಥಿತಿಯೊಂದಿಗೇ ಮಾತುಕತೆಗೆ ಬಂದಿದ್ದರು. ಅವರ ವರ್ತನೆ ನೋಡಿದರೆ, ಈ ಮಾತುಕತೆ ಫಲಪ್ರದವಾಗುವುದಿಲ್ಲ ಎಂದು ಮೊದಲೇ ನಿರ್ಧರಿಸಿಯೇ ಬಂದಂತಿತ್ತು ಎಂದು ಸೇನೆ ತಿಳಿಸಿದೆ.
ಭಾನುವಾರ ಚುಶುಲ್-ಮೋಲ್ಡೋ ಗಡಿ ಪಾಯಿಂಟ್‌ನಲ್ಲಿ ನಡೆದ ಎಂಟೂವರೆ ಗಂಟೆಗಳ ಮಾತುಕತೆ ಕುರಿತು ಸೋಮವಾರ ವಿವರಣೆ ನೀಡಿದ ಭಾರತೀಯ ಸೇನೆ, “ಪೂರ್ವ ಲಡಾಖ್‌ನ ಕೆಲವು ಪ್ರದೇಶಗಳಲ್ಲಿ ಇನ್ನೂ ಉಭಯ ಸೇನೆಗಳ ನಡುವೆ ಬಿಕ್ಕಟ್ಟು ಮುಂದಿವರಿದಿದ್ದು, ಅದನ್ನು ಪರಿಹರಿಸುವ ಸಲುವಾಗಿ ಈ ಮಾತುಕತೆ ನಡೆಸಲಾಗಿತ್ತು. ಎಲ್‌ಎಸಿಯಲ್ಲಿ ಬಿಕ್ಕಟ್ಟು ತಲೆದೋರಲು ಒಪ್ಪಂದ ಉಲ್ಲಂ ಸಿ, ಯಥಾಸ್ಥಿತಿಯನ್ನು ಬದಲಿಸಲು ಚೀನಾ ನಡೆಸುತ್ತಿರುವ ಏಕಪಕ್ಷೀಯ ಪ್ರಯತ್ನವೇ ಕಾರಣ. ಗಡಿಯಲ್ಲಿ ಶಾಂತಿ ನೆಲೆಸಬೇಕೆಂದರೆ ಚೀನಾವೇ ಸೂಕ್ತ ಹೆಜ್ಜೆಯಿಡಬೇಕು ಎಂದು ನಾವು ಸಲಹೆ ನೀಡಿದೆವು. ಆದರೆ, ನಾವು ನೀಡಿರುವ ಯಾವುದೇ ಸಲಹೆಯನ್ನೂ ಚೀನಾ ಒಪ್ಪಲಿಲ್ಲ’ ಎಂದು ಹೇಳಿದೆ. ಇದನ್ನೂ ಓದಿ :ಗಾಂಧೀಜಿ, ಜೆಪಿ ತಂದುಕೊಟ್ಟ ಸ್ವಾತಂತ್ರ್ಯ ನಶಿಸಿ ಹೋಗುತ್ತಿದೆ : ಮಾಜಿ ಪ್ರಧಾನಿ ಎಚ್ ಡಿಡಿ
Related Articles
Advertisement
ಕಳೆದ ತಿಂಗಳು ತವಾಂಗ್‌ನಲ್ಲಿ ಚೀನಾದ 200 ಸೈನಿಕರನ್ನು ಭಾರತೀಯ ಸೇನೆ ವಶಕ್ಕೆ ಪಡೆದು ಬಿಡುಗಡೆ ಮಾಡಿದ ಘಟನೆಯೇ ಚೀನಾ ಆಕ್ರೋಶಕ್ಕೆ ಕಾರಣ. ಹೀಗಾಗಿಯೇ ಅಲ್ಲಿನ ಸೇನಾಧಿಕಾರಿಗಳು ವ್ಯಗ್ರರಾಗಿ ಮಾತುಕತೆ ವೇಳೆ ವರ್ತಿಸಿರುವ ಸಾಧ್ಯತೆಗಳು ಇವೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ. ಇನ್ನೊಂದೆಡೆ, ಮಾತುಕತೆ ವಿಫಲವಾಗಲು ಭಾರತವೇ ಕಾರಣ ಎಂದು ಆರೋಪಿಸಿರುವ ಚೀನಾ, ಭಾರತದ ಬೇಡಿಕೆಗಳು ಅವಾಸ್ತವಿಕ ಹಾಗೂ ವಿಚಾರಹೀನವಾದದ್ದು ಎಂದು ಹೇಳಿದೆ.