Advertisement

India-China ಒಪ್ಪಂದ?: ಚಂದ್ರನಲ್ಲಿ ಅಣು ಸ್ಥಾವರ

01:10 AM Sep 10, 2024 | Team Udayavani |

ಹೊಸದಿಲ್ಲಿ: ಕಾಲು ಕೆರೆದು ಜಗಳ ತೆಗೆವ ಚೀನ ಜತೆಗೆ ಭಾರತ ಬಾಂಧವ್ಯ ಅಷ್ಟ ಕ್ಕಷ್ಟೆ. ಆದರೆ ಚೀನ ಜತೆಗೂಡಿ ಚಂದ್ರ ನಲ್ಲಿ ಪರಮಾಣು ಸ್ಥಾವರ ಸ್ಥಾಪಿಸ ಬೇಕೆಂದು ರಷ್ಯಾದ ನೇತೃತ್ವದಲ್ಲಿ ಕೈಗೊ ಳ್ಳುತ್ತಿರುವ ಯೋಜನೆಗಾಗಿ 2 ರಾಷ್ಟ್ರ ಗಳು ಒಟ್ಟಾಗಿ ಕೈ ಜೋಡಿಸುವ ಸಾಧ್ಯತೆಗಳಿವೆ.

Advertisement

ಈ ಪ್ರಸ್ತಾವ‌ಕ್ಕೆ ಉಭಯ ರಾಷ್ಟ್ರಗಳು ಒಪ್ಪಿದ್ದೇ ಆದಲ್ಲಿ ಭಾರತ- ಚೀನ ನಡುವೆ ಹೊಸದಾಗಿ “ಚಂದ್ರ ರಾಜತಾಂತ್ರಿಕತೆ’ ಸಂಬಂಧಕ್ಕೆ ನಾಂದಿ ಆಗಲಿದೆ. ರಷ್ಯಾದ ಪರಮಾಣು ಶಕ್ತಿ ನಿಗಮ ರೋಸತಮ್‌, ಅರ್ಧ ಮೆ.ವ್ಯಾ.ನಷ್ಟು ವಿದ್ಯುತ್‌ ಉತ್ಪಾದಿಸಬಲ್ಲ ಸಣ್ಣ ದೊಂದು ಪರಮಾಣು ಶಕ್ತಿ ಸ್ಥಾವರ ವನ್ನು ಚಂದ್ರನಲ್ಲಿ ಸ್ಥಾಪಿಸಲು ಉದ್ದೇಶಿ ಸಿದೆ. ಚಂದ್ರನಲ್ಲಿ ನೆಲೆ ಸ್ಥಾಪಿಸುವ ರಾಷ್ಟ್ರಗಳ ಕಾರ್ಯಾಚರಣೆಗೆ ಅಗತ್ಯ ವಿದ್ಯುತ್‌ ಪೂರೈಸುವುದು ಇದರ ಉದ್ದೇಶವಾಗಿದೆ.

ಖುದ್ದು ರೋಸತಮ್‌ ಮುಖ್ಯಸ್ಥ ಅಲೆಕ್ಸಿ ಲಿಖಾಚೆವ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಂದು ವೇಳೆ ರಷ್ಯಾದ ಪ್ರಸ್ತಾವ‌ ಒಪ್ಪಿ, ಚೀನದೊಂದಿಗೆ ಸೇರಿ ಭಾರತ ಈ ಯೋಜನೆಗೆ ಬೆಂಬಲ ನೀಡಿದರೆ, ಭಾರತವು 2040ರ ವೇಳೆಗೆ ಮಾನವ ಸಹಿತ ಚಂದ್ರಯಾನ ಯಶಸ್ವಿಗೊಳಿಸಿ, ನೆಲೆ ಸ್ಥಾಪಿಸಲು ಉದೇಶಿಸಿರುವ ಯೋಜನೆಗೂ ಸಹಕಾರಿಯಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next