Advertisement

ಚೀನಾ ಜತೆ ಮತ್ತೂಮ್ಮೆ ಗಡಿ ತಗಾದೆ ಖಚಿತ

07:30 AM Mar 02, 2018 | |

ನವದೆಹಲಿ: “ಭಾರತ ಮತ್ತು ಚೀನಾದ ಗಡಿ ಭಾಗದ ಸ್ಥಿತಿಯು ಅತ್ಯಂತ ಸೂಕ್ಷ್ಮವಾಗಿದ್ದು, ಅದು ಯಾವಾಗ ಬೇಕಿದ್ದರೂ ಸಿಡಿದೇಳುವ ಸಾಧ್ಯತೆ ದಟ್ಟವಾಗಿದೆ’ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಶ್‌ ಭಾಮ್ರೆ ಹೇಳಿದ್ದಾರೆ. 

Advertisement

ಡೋಕ್ಲಾಂ ವಿವಾದ ತಣ್ಣಗಾದ ಎಂಟು ತಿಂಗಳಲ್ಲೇ ಭಾಮ್ರೆ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ದೆಹಲಿಯಲ್ಲಿ ಗುರುವಾರ ಮಾತನಾಡಿದ ಅವರು, “ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಆಗಾಗ್ಗೆ ಗಸ್ತು ತಿರುಗುವಿಕೆ, ಅತಿಕ್ರಮಣದಂಥ ಘಟನೆಗಳು ಮರುಕಳಿಸುತ್ತಿವೆ. ಸೇನೆಯ ಆತ್ಮಸ್ಥೆರ್ಯ ಹೆಚ್ಚಿಸುವಂಥ ಕೆಲಸಗಳು ನಡೆಯುತ್ತಿದ್ದರೂ, ನಾವು ಯಾವುದೇ ಪರಿಸ್ಥಿತಿ ಎದುರಿಸಲೂ ಸಿದ್ಧವಿರಬೇಕಾಗುತ್ತದೆ,’ ಎಂದೂ ತಿಳಿಸಿದ್ದಾರೆ. ಇದೇ ವೇಳೆ, ಮತ್ತೂಂದು ನೆರೆರಾಷ್ಟ್ರ ಪಾಕಿಸ್ತಾನವು ಐಸಿಸ್‌ನಂಥ ಉಗ್ರಗಾಮಿಗಳನ್ನು ಭಾರತದತ್ತ ಕಳುಹಿಸುವ ಸಾಧ್ಯತೆಯೂ ಇದೆ ಎಂದೂ ಭಾಮ್ರೆ ಹೇಳಿದ್ದಾರೆ.

ಕಳೆದ ವರ್ಷ 73 ದಿನಗಳ ಕಾಲ ಡೋಕ್ಲಾಂನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಏರ್ಪಟ್ಟಿತ್ತು. ಆ ಬಳಿಕವೂ ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣದಂಥ ಮೂಲಸೌಕರ್ಯ ಕಾಮಗಾರಿಗಳನ್ನು ನಡೆಸು ತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ.

ಉಗ್ರನ ಹತ್ಯೆ: ಜಮ್ಮು-ಕಾಶ್ಮೀರದ ಬಂಡಿ ಪೋರಾ ಜಿಲ್ಲೆಯಲ್ಲಿ ಉಗ್ರನನ್ನು  ಭದ್ರತಾ ಪಡೆ ಹತ್ಯೆಗೈದಿದೆ. ಉಗ್ರ ಅಡಗಿರುವ ಮಾಹಿತಿ ಸಿಗುತ್ತಿದ್ದಂತೆ, ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದವು. ಗುಂಡಿನ ಚಕಮಕಿ ನಡೆದು ಆತನನ್ನು ಕೊಲ್ಲಲಾಗಿದೆ.

ಧರಿಬ್ಬರಿಗೆ ಗಾಯ
ಪೂಂಛ… ಮತ್ತು ರಜೌರಿ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದ ಭಾರತದ ಇಬ್ಬರು ಯೋಧರು ಗಾಯಗೊಂಡಿದ್ದಾರೆ.  ಇದೇ ವೇಳೆ, ಪಾಕ್‌ಸುಳ್ಳಿನ ಕಂತೆಯನ್ನು ಮುಂದುವರಿಸಿದ್ದು, ಭಾರತವೇ ಕದನ ವಿರಾಮ ಉಲ್ಲಂಘಿಸಿದೆ. ಇದರಿಂದ ನಮ್ಮ ಯೋಧರಿಬ್ಬರು ಮೃತ ಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next