Advertisement
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಲದಲ್ಲಿ ಎಸ್‌ಡಿಪಿಐ/ ಪಿಎಫ್ಐಯನ್ನು ಪೋಷಿಸಿದ್ದರು. ಅವರ ಅವಧಿಯಲ್ಲಿ 18 ಹಿಂದೂಗಳ ಹತ್ಯೆಯಾಗಿತ್ತು. ಆರೋಪಿಗಳ ಕೇಸನ್ನು ಸಿದ್ದರಾಮಯ್ಯ ಸರಕಾರ ವಾಪಸ್ ಪಡೆದಿತ್ತು. ಅಶಾಂತಿ ಸೃಷ್ಟಿಸಿರುವ ಅವರ ವಿರುದ್ಧ ಕಾಂಗ್ರೆಸ್ ಸ್ನೇಹ ಬೆಳೆಸಿತ್ತು. ಆದರೆ ಭಾರತದ ಭದ್ರತೆ ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರಕಾರದ ನಿಲುವಾಗಿದೆ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದು, ಪೇಸಿಎಂ ಎಂಬುವುದು ಕಾಂಗ್ರೆಸ್‌ನ ಸುಳ್ಳಿನ ಸುರಿಮಳೆಯಾಗಿದೆ. ಪೋಸ್ಟರ್ ಅಂಟಿಸಿದ ಡಿಕೆಶಿ ಇಡಿ ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಭ್ರಷ್ಟಾಚಾರದ ಬಗ್ಗೆ ವಿಚಾರಣೆಗೆ ಒಳಗಾಗಿ ಪೇ ಸಿಎಂ ಪೋಸ್ಟರ್ ಅಳವಡಿಸುತ್ತಾರೆ. ಕಾಂಗ್ರೆಸಿಗೆ ಪೇಸಿಎಂ ಪೋಸ್ಟರ್ ಅಳವಡಿಸಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದ ಬಗ್ಗೆ ಚರ್ಚೆಯಾಗಿಲ್ಲ
ಅರ್ಕಾವತಿ ಇಂದಿರಾ ಕ್ಯಾಂಟೀನ್ ಹಾಸಿಗೆಯಲ್ಲಿ ಹಣ ನುಂಗಿದವರು ಕಾಂಗ್ರೆಸ್ಸಿಗರು. ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟಾಚಾರದ ಉತ್ತುಂಗ ಏರಿಸಿದ ಕಾಂಗ್ರೆಸ್ಸಿಗರು ನಮ್ಮ ಕಾಮನ್ ಸಿಎಂ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರ ನಡೆದಿದ್ದರೆ ನ್ಯಾಯಾಲಯ, ಮುಖ್ಯಮಂತ್ರಿಗಳು, ಲೋಕಾಯುಕ್ತಕ್ಕೆ ದೂರು ಕೊಡಲಿ. ಆದರೆ 10 ದಿನದ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ದಿನವು ಚರ್ಚೆ ನಡೆದಿಲ್ಲ ಎಂದರು.
Related Articles
ವಿದ್ಯುತ್ ಬಿಲ್ ಏರಿಕೆ ವರ್ಷಕ್ಕೆ ಒಂದು ಬಾರಿ ನಡೆಯುತ್ತದೆ. ಕಲ್ಲಿದ್ದಲು ಬೆಲೆ ಏರಿಕೆಗೆ ಹೊಂದಾಣಿಕೆ ಮಾಡಿ ವಿದ್ಯುತ್ ದರ ನಿಗದಿಯಾಗುತ್ತದೆ. 9 ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಕಲ್ಲಿದ್ದಲು ದರ ನಿಗದಿಯಾಗುತ್ತದೆ. ಕಲ್ಲಿದ್ದಲು ಬೆಲೆ ಹೊಂದಾಣಿಕೆಗಾಗಿ ಬೆಲೆ ಏರಿಕೆ ಮಾಡಿದ್ದಾರೆ ಎಂದರು.
Advertisement
ನವರಾತ್ರಿ ಅನಂತರ ಸಚಿವ ಸಂಪುಟ ವಿಸ್ತರಣೆಅವಧಿ ಪೂರ್ವ ಚುನಾವಣೆ ರಾಜ್ಯದಲ್ಲಿ ಇಲ್ಲ.ನಿಗದಿತ ಸಮಯದಲ್ಲಿ ಚುನಾವಣೆ ಆಗುತ್ತದೆ. ಬಿಜೆಪಿ ಮತ್ತೂಮ್ಮೆ ಸರಕಾರವನ್ನು ರಚನೆ ಮಾಡುತ್ತದೆ. ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕೂಡ ಬಸವರಾಜ್ ಬೊಮ್ಮಾಯಿ. ಅವರೇ ಮುಂದಿನ ಚುನಾವಣೆ ನೇತೃತ್ವ ವಹಿಸುತ್ತಾರೆ ಎಂದು ಜೆಪಿ ನಡ್ಡಾ ಅವರೇ ಹೇಳಿದ್ದಾರೆ.ನಾವೆಲ್ಲರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದೇವೆ. ನಮ್ಮಲ್ಲಿ ಗೊಂದಲ ಇಲ್ಲ. ನಾವು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ನವರಾತ್ರಿ ಅನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು.