Advertisement

ಭಾರತ ಹಿಂದೂ ರಾಷ್ಟ್ರವಾಗಿಸೋದು ಅಸಾಧ್ಯ: ಬಿರ್‌ಪಿ

01:30 PM May 09, 2022 | Team Udayavani |

ಕಲಬುರಗಿ: ಪಾರಂಪರಿಕ ಮೂಲಭೂತವಾದಿಗಳು ಮತ್ತು ಸಂಘ ಪರಿವಾರದವರು ಎಷ್ಟೇ ಘೂಳಿಟ್ಟರೂ ಭಾರತವನ್ನು ಹಿಂದೂ ರಾಷ್ಟ್ರವಾಗಿ ಮಾಡಲು ಸಾಧ್ಯವಿಲ್ಲ. ವಾಸ್ತವದಲ್ಲಿ ಹಿಂದೂ ಮತ್ತು ಇಸ್ಲಾಮಿಕ ಎರಡೂ ಅಸಾಧ್ಯ ಎಂದು ಮಾಜಿ ಉಪಸಭಾಪತಿ ಬಿ.ಆರ್‌.ಪಾಟೀಲ ಹೇಳಿದರು.

Advertisement

ನಗರದ ಜಗತ್‌ ವೃತ್ತದಲ್ಲಿ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಬಸವ ಜಯಂತಿ ಪ್ರಯುಕ್ತ ರವಿವಾರ ಜಾಗತಿಕ ಲಿಂಗಾಯಿತ ಮಹಾಸಭಾ ಮತ್ತು ಹಲವಾರು ಬಸವಪರ ಸಂಘಟನೆಗಳು, ಕಾಯಕ ಸಮಾಜದ ಸಂಘಟನೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಲಿಂಗಾಯಿತ ಧರ್ಮ ಜಾಗೃತಿ ಕುರಿತು ಸರಣಿ ವಿಚಾರ ಮಂಥನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ಪ್ರಜಾಪ್ರಭುತ್ವವಾದಿ ದೇಶವಾಗಿದೆ. ಅದನ್ನು ಹಾಗೆ ಇರಲು ಬಿಡಿ ಎಂದು ಸಲಹೆ ನೀಡಿದ ಅವರು, ಲಿಂಗಾಯಿತ ಎನ್ನುವುದು ಜಾತಿ ಸೂಚಕವಲ್ಲ, ಧರ್ಮ ಸೂಚಕ. ಬಸವಣ್ಣವರು ಸ್ಥಾಪಿಸಿದ ವೈಜ್ಞಾನಿಕ ತಳಹದಿಯ ಧರ್ಮವಾಗಿದೆ. ಈ ವೈಚಾರಿಕ ಹೋರಾಟದಲ್ಲಿ ಖಂಡಿತ ಗೆಲುವು ಸಿಗಲಿದೆ. ಅದಕ್ಕಾಗಿ ನಾವು ತುಂಬಾ ತಾಳ್ಮೆಯಿಂದ ಹೋರಾಟವನ್ನು ಮುಂದಕ್ಕೆ ಒಯ್ಯಬೇಕು. ಇಲ್ಲದೆ ಹೋದರೆ ಹಾದಿ ತಪ್ಪಿ ಗುರಿ ಮುಟ್ಟುವುದಿಲ್ಲ ಎಂದರು.

ಲಿಂಗಾಯಿತ ಮಹಿಳೆಯಿಂದ ಸ್ವಾತಂತ್ರ್ಯ ಕಹಳೆ

ಬ್ರಿಟಿಷರ ವಿರುದ್ಧ 1857 ಮೊದಲ ಸ್ವಾತಂತ್ರ್ಯ ಸಂಗ್ರಾಮದ ಶುರುವಾಯಿತು. ಇದಕ್ಕೂ ಮುನ್ನವೇ ಬ್ರಿಟಿಷ್‌ ಅಧಿಕಾರಿ ವಿರುದ್ಧ ಹೋರಾಟಕ್ಕೆ ಇಳಿಯುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕಹಳೆ ಉದಿದ್ದು ಕಿತ್ತೂರು ರಾಣಿ ಚನ್ನಮ್ಮ ಎಂದು ವಿಶೇಷ ಉಪನ್ಯಾಸ ನೀಡಿದ ವಿಜಯಪುರದ ಪ್ರೊ| ಜೆ.ಎಸ್‌ .ಪಾಟೀಲ್‌ ಪ್ರತಿಪಾದಿಸಿದರು.

Advertisement

ಲಿಂಗಾಯಿತ ಧರ್ಮದ ನಿಜವಾದ ವೈರಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನು ಅರಿತು ಹೆಜ್ಜೆ ಇಡಬೇಕು. ಯಾವುದೇ ಒಂದು ಹೋರಾಟ, ಚಳುವಳಿ ಕಟ್ಟುವ ಮುನ್ನ ನಮ್ಮ ಶತ್ರುಗಳು ಯಾರೆಂಬುದನ್ನು ಗುರುತಿಸಿಕೊಂಡು ಮುನ್ನಡೆದರೆ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು.

ಪ್ರೊ| ಜೆ.ಎಸ್‌.ಪಾಟೀಲ್‌ ಷಟ್‌ ಸ್ಥಲ ಧ್ವಜಾರೋಣ ನೆರವೇರಿಸಿ ಉಪನ್ಯಾಸ ನೀಡಿದರು. ನಿವೃತ್ತ ಎಸ್ಪಿ ಎಸ್‌.ಬಿ.ಸಾಂಬಾ ಮಾತನಾಡಿದರು. ಜಾಗತಿಕ ಲಿಂಗಾಯಿತ ಮಹಾಸಭಾ ಕಾರ್ಯದರ್ಶಿ ಆರ್‌.ಜಿ.ಶೆಟಗಾರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೋಮಣ್ಣ ನಡಕಟ್ಟಿ, ಬಸವರಾಜ ದಣ್ಣೂರೆ, ಶಂಕ್ರೆಪ್ಪ ಪಾಟೀಲ್‌, ಈರಣ್ಣ ಹಡಪದ, ಡಾ| ಮಲ್ಲಿಕಾರ್ಜುನ ವಡ್ಡನಕೇರಿ, ಶಿವಶರಣ ಮೋತಕಪಲ್ಲಿ, ಶರಣಬಸಪ್ಪ ನಾಗೂರ, ರಮೇಶ ಧುತ್ತರಗಿ, ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್‌ ತೇಗಲತಿಪ್ಪಿ, ರಾಜಶೇಖರ ಯಂಕಂಚಿ, ಪ್ರಭುಲಿಂಗ ಮಹಾಗಾಂವಕರ್‌, ರವೀಂದ್ರ ಶಾಬಾದಿ, ಶರಣು ಕಲ್ಲಾ, ಶರಣು ಪಾಟೀಲ್‌, ಸತೀಶ ಸಜ್ಜನ, ಅಯ್ಯಣ್ಣ ನಂದಿ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next