ಹೊಸದಿಲ್ಲಿ: ನವೀಕರಿಸಬಹುದಾದ ಇಂಧನ ಶಕ್ತಿಯ ಸಾಕಷ್ಟು ಲಭ್ಯತೆಯು ಭಾರತಕ್ಕೆ ಅಂತರ್ಗತ ಪ್ರಯೋಜನವನ್ನು ನೀಡುತ್ತದೆ. “ಭಾರತವು ಹಸಿರು ಜಲಜನಕದ ಜಾಗತಿಕ ಕೇಂದ್ರವಾಗಬಹುದು” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಎನರ್ಜಿ ಫಾರ್ ಸಸ್ಟೆನೇಬಲ್ ಗ್ರೋತ್ ವಿಚಾರದಲ್ಲಿ ವೆಬಿನಾರ್ ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಸುಸ್ಥಿರ ಇಂಧನ ಮೂಲಗಳಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ ಎನ್ನುವುದು ಭಾರತದ ಸ್ಪಷ್ಟ ದೃಷ್ಟಿಯಾಗಿದೆ. ಗೃಹೋಪಯೋಗಿ ಉಪಕರಣಗಳು ಸೇರಿದಂತೆ ಹೆಚ್ಚು ಇಂಧನ ದಕ್ಷತೆಯ ಉತ್ಪನ್ನಗಳನ್ನು ತಯಾರಿಸಲು ಬಹಳಷ್ಟು ಕೆಲಸ ಮಾಡಬೇಕಾಗಿದೆ” ಎಂದು ಹೇಳಿದರು.
ಇದನ್ನೂ ಓದಿ:ಜೈಲಿನಿಂದ ಹೊರಬಂದವರು ವೈದ್ಯರ ಕಾರು ಕಳವಿಗೆ ಯತ್ನಿಸಿ ಮತ್ತೆ ಜೈಲು ಸೇರಿದರು..
ಮಿಷನ್ ಮೋಡ್ ನಲ್ಲಿ ಎಥೆನಾಲ್ ಮಿಶ್ರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. “ನಾವು ನಮ್ಮ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳನ್ನು ಇನ್ನಷ್ಟು ಆಧುನೀಕರಿಸಬೇಕಾಗಿದೆ” ಎಂದು ಅವರು ಹೇಳಿದರು.