Advertisement

ಕೆಎಸ್‌ಆರ್‌ಟಿಸಿಗೆ ಇಂಡಿಯಾ ಬಸ್‌ ಪ್ರಶಸ್ತಿ

11:40 AM Jul 10, 2018 | Team Udayavani |

ಬೆಂಗಳೂರು: ಮಲೇಷಿಯಾ ಸರ್ಕಾರ ನೀಡುವ “ಇಂಡಿಯಾ ಬಸ್‌ ಅವಾರ್ಡ್‌’ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಭಾಜನವಾಗಿದ್ದು, ಸತತ 4ನೇ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನಿಗಮವು ಬಾಚಿಕೊಂಡಿದೆ.  

Advertisement

ಕೆಎಸ್‌ಆರ್‌ಟಿಸಿ ಅನುಷ್ಠಾನಗೊಳಿಸಿರುವ ಮಾಹಿತಿ ತಂತ್ರಜ್ಞಾನ, ಸುರಕ್ಷತಾ ಹಾಗೂ ಕಾರ್ಯಸ್ಥಳಗಳಲ್ಲಿನ ಆರೋಗ್ಯಕರ ಉಪಕ್ರಮಗಳಿಗೆ “ಆಪರೇಟರ್‌ ಪ್ಯಾಸೆಂಜರ್‌ ಫ‌ಸ್ಟ್‌ ಇನಿಷಿಯೆಟಿವ್‌ (ಸ್ಟೇಟ್‌)’ ಪ್ರಶಸ್ತಿ ಲಭಿಸಿದೆ. 

ಮಲೇಶಿಯಾ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಡೈರೆಕ್ಟರ್‌ ಜನರಲ್‌ ದಟಕ್‌ ಸೆರಿ ಮಿರ್ಜಾ ಮೊಹಮದ್‌ ತೈಜಾಬ್‌ ಈ ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದ ಪರವಾಗಿ ನಿರ್ದೇಶಕ (ಸಿಬ್ಬಂದಿ ಮತ್ತು ಪರಿಸರ) ಕೆ. ಶ್ರೀನಿವಾಸ್‌ ಸ್ವೀಕರಿಸಿದರು. ಸಂಚಾರ ವ್ಯವಸ್ಥಾಪಕ ರಾಘವೇಂದ್ರ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next