Advertisement

77 ಸಾವಿರ ತ್ರಿವರ್ಣ ಧ್ವಜ ಹಾರಿಸಿ ದಾಖಲೆ; ಪಾಕ್‌ ದಾಖಲೆ ಮುರಿದ ಭಾರತ

01:04 AM Apr 24, 2022 | Team Udayavani |

ಪಟ್ನಾ: ಬಿಹಾರದ ಜಗದೀಶ್‌ಪುರದಲ್ಲಿ ಶನಿವಾರ ಒಂದೇ ಸಮಯದಲ್ಲಿ 77,700 ಮಂದಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

Advertisement

ಈ ಮೂಲಕ 2004ರಲ್ಲಿ ಲಾಹೋರ್‌ನಲ್ಲಿ 56 ಸಾವಿರ ಪಾಕಿಸ್ಥಾನ ಧ್ವಜ ಹಾರಿಸುವ ಆ ದೇಶ ನಿರ್ಮಿಸಿದ್ದ ದಾಖಲೆಯನ್ನು ಭಾರತ ಮುರಿದಿದೆ. ಬಿಹಾರದ ಜಗದೀಶ್‌ಪುರದ ರಾಜನಾ­ಗಿದ್ದ ವೀರ ಕುನ್ವಾರ್‌ ಸಿಂಗ್‌ನ 164ನೇ ವಿಜಯೋತ್ಸವ್‌ ಎಂಬ ಕಾರ್ಯ­ಕ್ರಮ­ವನ್ನು ಶನಿವಾರ ಆಯೋಜಿಸಲಾಗಿತ್ತು. ಅದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ

ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷವಾ­ಗಿದ್ದು ಆ ಪ್ರಯುಕ್ತ ಕಾರ್ಯಕ್ರಮದಲ್ಲಿ 77,700 ಧ್ವಜಗಳನ್ನು ಹಾರಿಸಲಾಯಿತು. ಆ ಮೂಲಕ ಪಾಕಿಸ್ಥಾನದ ದಾಖಲೆಯನ್ನು ಭಾರತ ಮುರಿದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next