Advertisement

ಪಾಕ್‌ ಮೇಲೆ ವಾಯು ದಾಳಿ: ವಿದೇಶಿ ರಾಯಭಾರಿಗಳಿಗೆ ಭಾರತ ಮಾಹಿತಿ

11:40 AM Feb 26, 2019 | udayavani editorial |

ಹೊಸದಿಲ್ಲಿ : ಪಾಕಿಸ್ಥಾನದಲ್ಲಿನ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಬೃಹತ್‌ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಇಂದು ಮಂಗಳವಾರ ನಡೆಸಿದ ಪ್ರಬಲ ವಾಯು ದಾಳಿಯ ಮಾಹಿತಿಯನ್ನು ಭಾರತ ಎಲ್ಲ ಪ್ರಮುಖ ದೇಶಗಳ ರಾಯಭಾರಿಗಳಿಗೆ ನೀಡಿತೆಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

ವಿದೇಶ ಕಾರ್ಯದರ್ಶಿ ವಿಜಯ್‌ ಗೋಖಲೆ ಮತ್ತು ಇತರ ಕಾರ್ಯದರ್ಶಿಗಳು, ಅಮೆರಿಕ, ರಶ್ಯ, ಚೀನ, ಫ್ರಾನ್ಸ್‌ ಮತ್ತು ಬ್ರಿಟನ್‌ ಸೇರಿದಂತೆ ಎಲ್ಲ ಪ್ರಮುಖ ದೇಶಗಳ ರಾಯಭಾರಿಗಳಿಗೆ ಭಾರತೀಯ ವಾಯು ಪಡೆಯ ವೈಮಾನಿಕ ದಾಳಿಯ ವಿವರಗಳನ್ನು ನೀಡಿದರು. 

ಶ್ರೀಲಂಕಾ, ಮಾಲ್ದೀವ್ಸ್‌, ಅಫ್ಘಾನಿಸ್ಥಾನ, ಭೂತಾನ್‌, ಟರ್ಕಿ ಮತ್ತು ಇಂಡೋನೇಶ್ಯ ರಾಯಭಾರಿಗಳಿಗೂ ವಾಯು ದಾಳಿಯ ಮಾಹಿತಿ ನೀಡಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next